BengaluruLifestyle

ಬೆಂಗಳೂರಿನ ಈ ಅಪಾರ್ಟ್‌ಮೆಂಟ್‌ ಮೇಲೆ ಬಿದ್ದ ಹನಿ ಮಳೆ ನೀರೂ ವೇಸ್ಟ್‌ ಆಗಲ್ಲ!

ಬೇಸಿಗೆಯಲ್ಲಿ ಬೆಂಗಳೂರಿನ ಜನ ಕುಡಿಯೋದಕ್ಕೂ ನೀರಿಲ್ಲದೆ ಪರದಾಡಿದ್ದರು.. ಯಾಕಂದ್ರೆ ಬೆಂಗಳೂರಿನಲ್ಲಿ ಕೋಟಿಗೂ ಮೀರಿ ಜನಸಂಖ್ಯೆ ಇದೆ.. ಆದ್ರೆ ಬಹುತೇಕ ಜನ ನಂಬಿಕೊಂಡಿರೋದು ಕಾವೇರಿ ನೀರು ಹಾಗೂ ಬೋರ್‌ವೆಲ್‌ ನೀರನ್ನು.. ಮಳೆ ಕಡಿಮೆಯಾದರೆ, ಎರಡೂ ನೀರಿಗೂ ಸಮಸ್ಯೆಯಾಗುತ್ತೆ.. ಹೀಗಾಗಿ ಬೆಂಗಳೂರಿನ ಜನಕ್ಕೆ ಮಳೆನೀರು ಕೊಯ್ಲು ಮಾಡುವಂತೆ ಸರ್ಕಾರ ಉತ್ತೇಜನ ನೀಡುತ್ತಾ ಬಂದಿದೆ.. ಹೊಸ ಕಟ್ಟಡಗಳನ್ನು ಕಟ್ಟುವವರಿಗೆ ಮಳೆ ನೀರು ಕೊಯ್ಲು ಕಡ್ಡಾಯ ಕೂಡಾ ಮಾಡಲಾಗಿದೆ.. ಆದ್ರೆ ಯಾರೂ ಈ ಕಾನೂನನ್ನು ಪಾಲಿಸುತ್ತಿಲ್ಲ.. ಹೀಗಾಗಿ ಮಳೆಗಾಲದಲ್ಲಿ ಮಳೆ ನೀರು ವ್ಯರ್ಥವಾಗುತ್ತದೆ.. ಮಳೆ ನೀರು ಎಲ್ಲೂ ಹೋಗಲಾಗದೆ ತಗ್ಗುಪ್ರದೇಶಗಳಿಗೆ ನುಗ್ಗುತ್ತದೆ.. ಆದ್ರೆ ಇಲ್ಲೊಂದು ಅಪಾರ್ಟ್‌ಮೆಂಟ್‌ ಇದೆ.. ಇದರ ಮೇಲೆ ಬಿದ್ದ ಒಂದು ಹನಿ ಮಳೆ ನೀರೂ ವೇಸ್ಟ್‌ ಆಗಲ್ಲ.. ಈ ಅಪಾರ್ಟ್‌ಮೆಂಟ್‌ನಲ್ಲಿ ನಿರ್ಮಿಸಿರುವ ಮಳೆ ನೀರು ಸಂಗ್ರದ ಬೃಹತ್‌ ಬಾವಿಯೊಳಗೆ ಆ ನೀರು ಶೇಖರಣೆಯಾಗುತ್ತೆ.. ಇದರಿಂದಾಗಿ ಈ ಅಪಾರ್ಟ್‌ ವಾಸಿಗಳಿಗೆ ಎಂತ ಬೇಸಿಗೆಯಲ್ಲೂ ನೀರಿನ ಸಮಸ್ಯೆಯಾಗುವುದಿಲ್ಲ..

ಇತ್ತೀಚಿಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಪಾರ್ಟ್ ಮೆಂಟ್ ಒಂದರಲ್ಲಿ ಮಳೆ ಕೊಯ್ಲು ವ್ಯವಸ್ಥೆ ಅಳವಡಿಸಿ ನೀರು ಚೇತರಿಕೆಗೆ ಬೃಹತ್ ಬಾವಿ ನಿರ್ಮಿಸಲಾಗಿದೆ.. ಬೆಂಗಳೂರಿನ ದೊಮ್ಮಲೂರಿನಲ್ಲಿರುವ ಅಪಾರ್ಟ್‌ಮೆಂಟ್ ಮಳೆಗಾಲದಲ್ಲಿ ನೀರಿನ ಚೇತರಿಕೆಗಾಗಿ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಅಪಾರ್ಟ್‌ಮೆಂಟ್‌ನ ಮೇಲ್ಛಾವಣಿಯಲ್ಲಿ ಸಂಗ್ರಹವಾದ ಮಳೆ ನೀರನ್ನು ಮರುಬಳಕೆ ಮಾಡಲು ರೀಚಾರ್ಜ್ ವೆಲ್ ನಿರ್ಮಿಸಲಾಗಿದೆ. ಈ ಬಾವಿಯನ್ನು ಮುನಿಯಪ್ಪ ಮತ್ತು ಅವರ ತಂಡ ನಿರ್ಮಿಸಿದ್ದು, ಮುನಿಯಪ್ಪ ಅವರ ಮಹತ್ತರ ಕಾರ್ಯಕ್ಕಾಗಿ ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ನ ವತಿಯಿಂದ ಮುನಿಯಪ್ಪ ಅವರನ್ನು ಸನ್ಮಾನಿಸಲಾಯಿತು.

ಈ ನಿಟ್ಟಿನಲ್ಲಿ ಜನ್ರೈಮನ್ ಎಂಬ ಎಕ್ಸ್ ಅಕೌಂಟ್ ನಲ್ಲಿ ವಿಶೇಷ ವಿಡಿಯೋವನ್ನು ಶೇರ್ ಮಾಡಲಾಗಿದೆ.. ನೀರಿನ ಸಮಸ್ಯೆ ನೀಗಿಸಲು ಅಪಾರ್ಟ್ ಮೆಂಟ್ ನಲ್ಲಿ ಬಾವಿ ತೋಡಿದ ಮುನಿಯಪ್ಪ ಅವರನ್ನು ಜನರು ಸನ್ಮಾನಿಸುತ್ತಿರುವ ದೃಶ್ಯ ವೈರಲ್ ಆಗಿದೆ. ಶೇರ್ ಮಾಡಿದ ಕೂಡಲೇ ನೆಟಿಜನ್‌ಗಳ ಹೃದಯ ಕದ್ದಿದೆ. ಲಕ್ಷಾಂತರ ವೀಕ್ಷಣೆಗಳಾಗಿವೆ. ಮಳೆ ನೀರು ವ್ಯರ್ಥವಾಗದಂತೆ ಹೆಚ್ಚು ಕೊಳವೆಬಾವಿಗಳನ್ನು ನಿರ್ಮಿಸಿ ನೀರು ಹಿಡಿದಿಟ್ಟುಕೊಳ್ಳುವಂತೆ ಎಲ್ಲರೂ ಕರೆ ನೀಡುತ್ತಿದ್ದಾರೆ.

Share Post