BSY ನಿವಾಸಕ್ಕೆ ಈಶ ಪ್ರತಿಷ್ಠಾನದ ಸದ್ಗುರುಗಳು ಭೇಟಿ, ಕುಟುಂಬಸ್ಥರಿಗೆ ಶುಭ ಹಾರೈಕೆ
ಬೆಂಗಳೂರು: ಡಾಲರ್ಸ್ ಕಾಲೋನಿಯಲ್ಲಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರ ಮನೆಗೆ ಈಶ ಪ್ರತಿಷ್ಠಾನದ ಸದ್ಗುರುಗಳು ಭೇಟಿ ನೀಡಿ, ಕುಟುಂಬಸ್ಥರೆಲ್ಲರೂ ಚೆನ್ನಾಗಿರಲೆಂದು ಶುಭ ಹಾರೈಸಿದ್ದಾರೆ. ಈ ಬಗ್ಗೆ ಯಡಿಯೂರಪ್ಪನವರು ತಮ್ಮ ಟ್ವಿಟ್ಟರ್‌ನಲ್ಲಿ ಖಾತೆಯಲ್ಲಿ ಪೋಸ್ಟ್ ಮಾಡಿ ಧನ್ಯವಾದಗಳನ್ನು ತಿಳಿಸಿದ್ದಾರೆ.
ಇಂದು ನಮ್ಮ ಮನೆಗೆ ಆಗಮಿಸಿ ಆಶೀರ್ವದಿಸಿದ ಈಶ ಪ್ರತಿಷ್ಠಾನದ ಪೂಜ್ಯ ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ಭಕ್ತಿಪೂರ್ವಕ ವಂದನೆಗಳು. ಅಕಾಲಿಕವಾಗಿ ನಮ್ಮನ್ನು ಅಗಲಿದ ಮೊಮ್ಮಗಳನ್ನು ಕಳೆದುಕೊಂಡು ದುಃಖದಲ್ಲಿರುವ ಕುಟುಂಬದ ಸದಸ್ಯರನ್ನು, ಸದ್ಗುರುಗಳು ಸಾಂತ್ವನದ ಮಾತುಗಳಿಂದ ಸಂತೈಸಿದ್ದು ಮನಸ್ಸಿಗೆ ಅತ್ಯಂತ ಸಮಾಧಾನವುಂಟುಮಾಡಿದೆ. ಎಂದು ಟ್ವೀಟ್ ಮಾಡಿದ್ದಾರೆ.
ಇಂದು ನಮ್ಮ ಮನೆಗೆ ಆಗಮಿಸಿ ಆಶೀರ್ವದಿಸಿದ ಈಶ ಪ್ರತಿಷ್ಠಾನದ ಪೂಜ್ಯ ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ಭಕ್ತಿಪೂರ್ವಕ ವಂದನೆಗಳು. ಅಕಾಲಿಕವಾಗಿ ನಮ್ಮನ್ನು ಅಗಲಿದ ಮೊಮ್ಮಗಳನ್ನು ಕಳೆದುಕೊಂಡು ದುಃಖದಲ್ಲಿರುವ ಕುಟುಂಬದ ಸದಸ್ಯರನ್ನು, ಸದ್ಗುರುಗಳು ಸಾಂತ್ವನದ ಮಾತುಗಳಿಂದ ಸಂತೈಸಿದ್ದು ಮನಸ್ಸಿಗೆ ಅತ್ಯಂತ ಸಮಾಧಾನವುಂಟುಮಾಡಿದೆ. @SadhguruJV pic.twitter.com/XKpqGe29W7
— B.S. Yediyurappa (@BSYBJP) February 12, 2022
ಇತ್ತೀಚೆಗಷ್ಟೇ ಮೊಮ್ಮಗಳು ಸೌಂದರ್ಯಳ ನಿಧನದಿಂದ ಯಡಿಯೂರಪ್ಪನವರ ಕುಟುಂಬ ನೋವಿನಲ್ಲಿತ್ತು. ಇಂದು ಅವರ ನಿವಾಸಕ್ಕೆ ಭೇಟಿ ನೀಡಿ, ಸೌಂದರ್ಯ ಮಗುವನ್ನು ಎತ್ತಿಕೊಂಡು ಮುದ್ದಾಡಿ, ಶುಭ ಹಾರೈಸಿದ್ದಾರೆ. ಕುಟುಂಬಸ್ಥರೆಲ್ಲರೂ ಸಕಲ ಆರೋಗ್ಯ ಐಶ್ವರ್ಯದಿಂದ ಇರಲು ಸದ್ಗುರುಗಳು ಆಶೀರ್ವಾದ ಮಾಡಿದ್ದಾರೆ. ಇದರಿಂದ ಯಡಿಯೂರಪ್ಪನವರು ಮನಸಿಗೆ ತುಸು ನೆಮ್ಮದಿ ಬಂದಂತಾಗಿದೆ ಗುರುಗಳ ಆಗಮನ ನಮಗೆ ಸಮಾಧಾನ ತಂದಿದೆ ಎಂದಿದ್ದಾರೆ.