ವಿರೋಧ ಪಕ್ಷ ಇರೋದೆ ಆರೋಪ ಮಾಡೋಕೆ-ಪ್ರಿಯಾಂಕ್ ಖರ್ಗೆ ವಿರುದ್ಧ MTBವ್ಯಂಗ್ಯ
ಚಿಕ್ಕಬಳ್ಳಾಪುರ: ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಸಚಿವ ಎಂಟಿಬಿ ನಾಗರಾಜ್ ತಿರುಗೇಟು ನೀಡಿದ್ದಾರೆ. ವಿರೋಧಪಕ್ಷ ಇರೋದೆ ಆಢಳಿತ ಪಕ್ಷದ ಮೇಲೆ ಆರೋಪ ಮಾಡೋಕೆ. ಈ ನೆಲದ ಎಲ್ಲಾ ಸಮುದಾಯಗಳಿಗೂ ಒಂದೇ ಕಾನೂನು. ಜಾತಿಗೊಂದು ಕಾನೂನು ಇಲ್ಲ ಇದು ಜಾತ್ಯಾತೀತ ದೇಶವಾಗಿದೆ. ರಾಜಮಹಾರಾಜ ಕಾಲದಿಂದಲೂ ಕಾನೂನಿನಡಿಯಲ್ಲೇ ಇದ್ದೀವಿ. ವಿವಾದ ಹೈಕೋರ್ಟ್ ಅಂಗಳದಲ್ಲಿದೆ. ಈಗ ಮಧ್ಯಂತರ ತೀರ್ಪು ನೀಡಿದ್ದಾರೆ. ಅಂತಿಮ ಆದೇಶ ಬರುವವರೆಗೂ ಸಮಾಧಾನವಾಗಿ ಇರಬೇಕು.
ನ್ಯಾಯಾಲಯ ನೀಡುವ ತೀರ್ಮಾನಕ್ಕೆ ನಾವೆಲ್ಲ ಬದ್ದರಾಗಿರಬೇಕು. ಕೋರ್ಟ್ ತೀರ್ಪು ಬರೋವವರೆಗೂ ಚಿಕ್ಕಬಳ್ಳಾಪುರದಲ್ಲಿ ಕಟ್ಡೆಚ್ಚರ ವಹಿಸಲಾಗಿದೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಿವುದಿಲ್ಲ. ಪೊಲೀಸ್ ಇಲಾಖೆಗೆ ಎಲ್ಲಾ ರೀತಿಯ ಕ್ರಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದೇವೆ ಎಂದು ಚಿಂತಾಮಣಿಯ ಬೂರಗಮಾಕಲಹಳ್ಳಿಯಲ್ಲಿ ಎಂಟಿಬಿ ನಾಗರಾಜ್ ಹೇಳಿಕೆ ನೀಡಿದ್ದಾರೆ