Districts

ಹೆತ್ತವರಿಂದ ಜೀವ ಬೆದರಿಕೆ ಹಿನ್ನೆಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ ನವ ಜೋಡಿ

ಚಿಕ್ಕಬಳ್ಳಾಪುರ: ಪ್ರೇಮಿಗಳ ದಿನಾಚರಣೆಗೆ ಎರಡು ದಿನಗಳು ಬಾಗಿ ಇರುವಾಗಲೇ ನವ ಜೋಡಿಯೊಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.. ಆರೋಗ್ಯ ಸಚಿವ ಡಾ. ಸುಧಾಕರ್ ತವರು ಗ್ರಾಮ ಪೆರೇಸಂದ್ರ ಗ್ರಾಮದ ಕೃಷ್ಣಪ್ಪ ಅವರ ಪುತ್ರಿ ವಸುಧಾ ಹಾಗೂ ಅಪ್ಪಸನ ಹಳ್ಳಿ ಗ್ರಾಮದ ಶೆಟ್ಟಿ ರಾಮಯ್ಯ ಮಗ ಗೋವಿಂದ ಎಂಬಾತನನ್ನು ಪ್ರೀತಿಸಿ ಕಳೆದ 10 ದಿನಗಳ ಹಿಂದೆ ಮದುವೆಯಾಗಿದ್ದರು.. ಆದರೆ, ಪೋಷಕರಿಗೆ ಮಾಹಿತಿ ತಿಳಿಯುತ್ತಿದ್ದಂತೆ ಪ್ರಾಣ ಬೆದರಿಕೆ ಕರೆಗಳು ಬಂದಿವೆಯಂತೆ. ನಮಗೆ ಬದುಕಲು ಅವಕಾಶ ಕೊಡಿ ಎಂದು ಚಿಂತಾಮಣಿ ಪೊಲೀಸ್ ಠಾಣೆ ಮೆಟ್ಟಿಲೇರಿ ಪೋಷಕರ ಮೇಲೆ ದೂರು ದಾಖಲಿಸಿದ್ದಾರೆ.
ಮದುವೆಯ ನಂತರ ಧರ್ಮಸ್ಥಳಕ್ಕೆ ಹೋಗಿದ್ದ ಜೋಡಿ, ಅಷ್ಟರೊಳಗೆ ಪೋಷಕರ ಕಡೆಯಿಂದ ಜೀವ ಬೆದರಿಕೆ ಕರೆಗಳು ಬಂದಿವೆ. ಸದ್ಯ ಏನಾದ್ರು ಆಗಲೀ ನಮ್ಮನ್ನು ಬೇರೆ ಮಾಡಿ ಮತ್ತೊಂದು ಮದುವೆ ಮಾಡಲು ಪೋಷಕರು ನಿರ್ಧರಿಸಿದ್ದಾರೆ. ನಮ್ಮ ತಂದೆ ಮಾವಂದಿರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಪ್ರಣಯ ಪ್ರೇಮಿಗಳು, ತಮ್ಮ ಪ್ರಾಣ ರಕ್ಷಣೆಗಾಗಿ ಚಿಂತಾಮಣಿ ನಗರ ಠಾಣೆಯ ಮೆಟ್ಟಿಲೇರಿದ್ದು, ನ್ಯಾಯ ಸಿಗುವವರೆಗೂ ಇಲ್ಲಿಯೇ ಇರುವುದಾಗಿ ಬೇಡಿಕೊಂಡಿದ್ದಾರೆ.

Share Post