ಭಾರತದಿಂದ ಕಳುವಾಗಿದ್ದ 1,200ವರ್ಷಗಳ ಹಿಂದಿನ ಬೌದ್ಧ ವಿಗ್ರಹ ಇಟಲಿಯಲ್ಲಿ ಪತ್ತೆ
ಇಟಲಿ: ಭಾರತದ ಹಳೆಯ ವಿಗ್ರಹಗಳು ಐತಿಹಾಸಿಕ ವಸ್ತುಗಳನ್ನು ವಿದೇಶಿಯರು ಕಳ್ಳತನ ಮಾಡುವುದು ಇದೇ ಮೊದಲೇನಲ್ಲ ನೂರಾರು ವರ್ಷಗಳಿಂದ ಭಾರತವನ್ನು ನುಂಗಿ ನೀರ್ಕುಡಿದಿದ್ದಾರೆ. ಅಷ್ಟಾದರೂ ಅವರ ಆತ್ಮಕ್ಕೆ ಸಾಂತಿ ಇಲ್ಲ ಎಂಬಂತೆ ಕಣ್ಣಿಗೆ ಕಾಣುವ ಐತಿಹ್ಯ ಹೊಂದಿರುವ ವಿಗ್ರಹಳು, ಬೆಲೆ ಬಾಳುವ ವಸ್ತುಗಳನ್ನು ಕದಿಯುವ ಪ್ರಯತ್ನ ಮಾತ್ರ ನಿಂತಿಲ್ಲ.ಅದರ ಹಾದಿಯಲ್ಲೇ 20ವರ್ಷಗಳ ಹಿಂದೆ ಕದ್ದಿರುವ ಬೌದ್ಧ ವಿಗ್ರಹ ಇಟಲಿಯಲ್ಲಿ ಪತ್ತೆಯಾಗಿದೆ.
ಭಾರತದಿಂದ ಕಳವಾಗಿದ್ದ 1200 ವರ್ಷಗಳಷ್ಟು ಹಳೆಯದಾದ ಬೌದ್ಧ ಪ್ರತಿಮೆ ಇಟಲಿಯಲ್ಲಿ ಪತ್ತೆಯಾಗಿದೆ. ಮಿಲನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅವಲೋಕಿತೇಶ್ವರ ಪದಮಪಾಣಿ(Avalokiteshwara Padamapani) ಬೌದ್ಧ ಪ್ರತಿಮೆಯನ್ನು ವಶಪಡಿಸಿಕೊಂಡಿದೆ. 20 ವರ್ಷಗಳ ಹಿಂದೆ ಭಾರತದಿಂದ ಕಳ್ಳಸಾಗಣೆಯೊಂದಿಗೆ ಈ ವಿಗ್ರಹವನ್ನು ರಫ್ತು ಮಾಡಲಾಗಿತ್ತು. ದೇವಿಸ್ಥಾನ ಕುಂದಲ್ಪುರ್ ದೇವಾಲಯದ ಸುಮಾರು 1200 ವರ್ಷಗಳ ಹಿಂದಿನ ವಿಗ್ರಹವಾಗಿದೆ. ಇದನ್ನು 2000 ಇಸವಿಗಿಂತ ಮೊದಲೇ ಕದ್ದು ಬೇರೆ ದೇಶಗಳಿಗೆ ಕಳ್ಳಸಾಗಣೆ ಮಾಡಲಾಗಿತ್ತು ಎನ್ನಲಾಗಿದೆ.
‘8 ರಿಂದ 12ನೇ ಶತಮಾನದ ಅವಲೋಕಿತೇಶ್ವರ ವಿಗ್ರಹ ನಿಂತಿರುವ ಭಂಗಿಯಲ್ಲಿ ಇದ್ದು, ಅದರ ಎಡಗೈಯಲ್ಲಿ ಕಮಲ ಹೂ ಅರಳಿದೆ ಎಂದು ಭಾರತೀಯ ಕಾನ್ಸುಲೇಟ್ ಸ್ಪಷ್ಟಪಡಿಸಿದೆ. ಕೆಲ ದಿನಗಳ ಹಿಂದೆ ಫ್ರೆಂಚ್ ಆರ್ಟ್ ಮಾರ್ಕೆಟ್ ನಲ್ಲಿದ್ದ ಶಿಲ್ಪ ಈಗ ಇಟಲಿಯ ಮಿಲನ್ ತಲುಪಿದೆ. ಸಿಂಗಾಪುರ ಮತ್ತು ಆರ್ಟ್ ರಿಕವರಿ ಇಂಟರ್‌ನ್ಯಾಶನಲ್, ಇಂಡಿಯನ್ ಪ್ರೈಡ್ ಪ್ರಾಜೆಕ್ಟ್, ಪ್ರತಿಮೆಯನ್ನು ಮರುಸ್ಥಾಪಿಸುವಲ್ಲಿ ಸಹಾಯ ಮಾಡುತ್ತಿವೆ.
Delighted to be part of recovery and restitution of priceless 8th century stone statue of Avalokiteshwara Padamapani – missing since early 2000 from Devisthan Kundulpur Temple Bihar, India. 1/2…
— India in Milan (@CGIMilan) February 10, 2022