Districts

HIJAB CASE: ಬಿಜೆಪಿ ಶಾಸಕ ರಘುಪತಿ ಭಟ್‌ಗೆ ಜೀವ ಬೆದರಿಕೆ

ಉಡುಪಿ: ಹಿಜಾಬ್‌ ವಿವಾದಕ್ಕೆ (hijab case) ಸಂಬಂಧಿಸಿದಂತೆ ಉಡುಪಿ ಶಾಸಕ ರಘುಪತಿ ಭಟ್‌ಗೆ (mla raghupati bhat) ಬೆದರಿಕೆ ಕರೆಗಳು ಬಂದಿವೆ. ಈ ಬಗ್ಗೆ ಅವರೇ ಮಾಹಿತಿ ನೀಡಿದ್ದು, ಗೃಹ ಸಚಿವರಿಗೆ ಈ ಬಗ್ಗೆ ಮೌಖಿಕ ದೂರು ನೀಡಿದ್ದಾರೆ. ವಿದೇಶಗಳಿಂದ ಇಂಟರ್‌ನೆಟ್‌ (internet calls) ಮೂಲಕ ಶಾಸಕರಿಗೆ ಕರೆ ಮಾಡಲಾಗಿದ್ದು, ಮುಸಲ್ಮಾನರ ವಿರುದ್ಧ ನೀನು ಮಾತನಾಡುತ್ತಿದ್ದೀಯ. ನಿನ್ನನ್ನು ಹೇಗೆ ಮಟ್ಟ ಹಾಕಬೇಕೆಂದು ನಮಗೆ ಗೊತ್ತಿದೆ ಎಂದು ಬೆದರಿಸಿದ್ದಾರೆ ಎನ್ನಲಾಗಿದೆ.

ಶಾಸಕ ರಘುಪತಿ ಭಟ್‌ಗೆ ನಿರಂತರವಾಗಿ ಕರೆ ಮಾಡುತ್ತಿರುವ ಅನಾಮಿಕರು, ಕೊಲೆ ಮಾಡುವುದಾಗಿ ಬೆದರಿಸಿದ್ದಾರಂತೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕರು, ಇಂತಹ ಬೆದರಿಕೆಗಳನ್ನು ಚಿಕ್ಕವನಿದ್ದಾನಿಂದಲೇ ನೋಡುತ್ತಾ ಬಂದಿದ್ದೇನೆ. ನಾನು ಯಾವುದಕ್ಕೂ ಹೆದರುವುದಿಲ್ಲ ಎಂದು ಹೇಳಿದ್ದಾರೆ.

 

Share Post