BengaluruCrime

ಒಣಮರದ ಕೊಂಬೆ ಬಿದ್ದು ಜೀವನ್ಮರಟ ಹೋರಾಟ ನಡೆಸುತ್ತಿದ್ದ ಬಾಲಕಿ ಕೊನೆಯುಸಿರು

ಬೆಂಗಳೂರು: ಮರದ ಮೇಲಿಂದ ಒಣಗಿರುವ ಕೊಂಬೆ ಬಿದ್ದು ಸತತ ಎರಡು ವರ್ಷಗಳಿಂದ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 10 ವರ್ಷದ ಪುಟ್ಟ ಬಾಲಕಿ ರಿಚೆಲ್‌ ಪ್ರಿಷಾ ಇಂದು ಚಿಕಿತ್ಸೆ ಫಲಾಕರಿಯಾಗದೆ ಕೊನೆಯುಸಿರೆಳೆದಿದ್ದಾರೆ. ತನ್ನ ತಂದೆಯೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಒಣಗಿರುವ ಕೊಂಬೆ ಬಿದ್ದು ತನ್ನ ಜೀವನವನ್ನೇ ಕಸಿದುಕೊಂಡಿದೆ. ಮಗಳ ಸಾವನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮಗುವಿನ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಸ್ವತಃ ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ ವಿಚಾರ ತಿಳಿದು ಬೇಸರ ವ್ಯಕ್ತಿಪಡಿಸಿದ್ದಾರೆ.

ಒಣ ಮರದ ಕೊಂಬೆ ತಲೆಯ ಮೇಲೆ ಬಿದ್ದು ಗಾಯಗೊಂಡು 702 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ರೆಚೆಲ್ ಪ್ರಿಷಾ ಇಂದು ಉಸಿರು ಚೆಲ್ಲಿರುವ ವಿಷಯ ತಿಳಿದು ಬಹಳ ದುಃಖವಾಯಿತು. ಆ ಮಗು ಬದುಕಿ ಬರುತ್ತಾಳೆ ಎಂಬ ನಿರೀಕ್ಷೆ ನನ್ನದಾಗಿತ್ತು. ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಕ್ಷೇಮ ವಿಚಾರಿಸಿದ್ದೆ. ಕೆಲ ಸಮಯ ಮಗುವಿನ ಜತೆಯಲ್ಲೇ ಸಮಯ ಕಳೆದಿದ್ದೆ. ಸತತ ಎರಡು ವರ್ಷ ನಿರಂತರವಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ರಚೆಲ್ ಅಗಲಿಕೆ ಸಹಿಸಲು ನನಗೆ ಆಗುತ್ತಿಲ್ಲ.

ಆ ಕಂದಮ್ಮನಿಗೆ ಭಗವಂತ ಚಿರಶಾಂತಿ ದಯಪಾಲಿಸಲಿ. ಇಷ್ಟು ದೀರ್ಘಕಾಲ ಮಗು ಮನೆಗೆ ಬರುತ್ತಾಳೆ ಎಂದು ನಂಬಿ ಪರಿತಪಿಸಿದ್ದ ತಂದೆ-ತಾಯಿಗೆ ದುಃಖ ಭರಿಸುವ ಶಕ್ತಿ ನೀಡಲಿ. ಇನ್ನಾದರೂ ಈ ಬಗೆಯ ಸಾವುಗಳು ನಿಲ್ಲಲಿ ಹಾಗೂ ಬಿಬಿಎಂಪಿಯ ಇಂಥ ನಿರ್ಲಕ್ಷ್ಯ ಮರುಕಳಿಸುವುದು ಬೇಡ ಎಂದು ಟ್ವೀಟ್‌ ಮಾಡಿದ್ದಾರೆ.

ಇನ್ನು ಮುಗ್ದ ಬಾಲಕಿ ಸಾವಿಗೆ ಬಿಬಿಎಂಪಿ ನಿರ್ಲಕ್ಷ್ಯವೇ ಕಾರಣ ಎಂದು ಜನ ಆರೋಪ ಮಾಡ್ತಿದಾರೆ. ರಸ್ತೆಗಳಲ್ಲಿ ಒಣಗಿರುವ ಮರಗಳನ್ನು ಕಡಿಯಬೇಕಿರುವುದು ಬಿಬಿಎಂಪಿ ಕರ್ತಬ್ಯ. ಅಧಿಕಾರಿಗಳ ಬೇಜಾವಾಬ್ದಾರಿತನಕ್ಕೆ ಇಂದು ಮುಗ್ದ ಜೀವ ಬಲಿಯಾಗಿದೆ. ಇವರ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಬಲಿ ಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share Post