HIJAB: ರಾಜ್ಯದ ಗಡಿ ದಾಟಿದ ಹಿಜಾಬ್ ವಿವಾದ; ಪುದುಚೇರಿ, ಮಧ್ಯಪ್ರದೇಶದಲ್ಲೂ ತಲೆಬಿಸಿ
ನವದೆಹಲಿ: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ರಾಜ್ಯ ಸರ್ಕಾರಕ್ಕೆ ತಲೆಬಿಸಿ ತಂದೊಡ್ಡಿದೆ.. ವಿಷಯ ಕೋರ್ಟ್ ಮೆಟ್ಟಿಲೇರಿದೆ. ಹೀಗಿರುವಾಗಲೇ ಈ ವಿವಾದ ಬೇರೆ ರಾಜ್ಯಗಳಿಗೂ ವ್ಯಾಪಿಸಿದೆ. ಮಧ್ಯಪ್ರದೇಶ (madhyapradesh) ಹಾಗೂ ಪುದುಚೇರಿಯಲ್ಲೂ ಈ ವಿವಾದ ಹೊಗೆಯಾಡಲು ಶುರು ಮಾಡಿದೆ.
ಹಿಜಾಬ್ ಧರಿಸಿ ಶಾಲೆಗೆ ಬರಬೇಕೆ, ಬೇಡವೇ ಎಂಬುದರ ಬಗ್ಗೆ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಿರುವಾಗಲೇ, ಮಧ್ಯಪ್ರದೇಶದ ಶಿಕ್ಷಣ ಸಚಿವರು ಇಂಧರ್ ಸಿಂಗ್ ಅವರು, ಹಿಜಾಬ್ ಮೇಲಿನ ನಿರ್ಬಂಧವನ್ನು ಬೆಂಬಲಿಸಿದ್ದಾರೆ. ಹಿಜಾಬ್ ಸಮವಸ್ತ್ರದ ಭಾಗವಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಶಾಲೆಗಳಲ್ಲಿ ಕಟ್ಟುನಿಟ್ಟಾಗಿ ಸಮವಸ್ತ್ರ ಸಂಹಿತೆಯನ್ನು ಜಾರಿ ಮಾಡೋದಾಗಿಯೂ ಹೇಳಿಕೊಂಡಿದ್ದಾರೆ. ಹೀಗಾಗಿ, ಸಚಿವರ ಈ ಹೇಳಿಕೆಯನ್ನು ಕಾಂಗ್ರೆಸ್ ಸೇರಿ ಇತರ ಪಕ್ಷಗಳು ಖಂಡಿಸುತ್ತಿವೆ.
ಇನ್ನು ಪುದುಚೇರಿಯಲ್ಲಿ ಸರ್ಕಾರಿ ಶಾಲೆಯ (government school) ಮುಖ್ಯಶಿಕ್ಷಕರೊಬ್ಬರು, ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಪ್ರಶ್ನಿಸಿದ್ದಾರೆ. ಶಾಲೆಯಲ್ಲಿ ಹಿಜಾಬ್ ಧರಿಸದಂತೆ ಹೇಳಿದ್ದಾರೆ. ಇದು ನಡೆದಿರೋದು, ಅರಿಯಾಂಕುಪ್ಪಂ ಎಂಬ ಊರಿನಲ್ಲಿರುವ ಸರ್ಕಾರಿ ಶಾಲೆಯಲ್ಲಿ. ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ.