Districts

ಸಿಂಧನೂರಿನಲ್ಲಿ 18ವಿದ್ಯಾರ್ಥಿಗಳು ಖಾಕಿ ವಶಕ್ಕೆ, ಶಿವಮೊಗ್ಗದಲ್ಲಿ 144ಸೆಕ್ಷನ್‌ ಜಾರಿ

ರಾಯಚೂರು/ಶಿವಮೊಗ್ಗ: ಹಿಜಾಬ್/ಕೇಸರಿ ಶಾಲು ವಿವಾದ ಅತಿರೇಕದ ಮಟ್ಟ ತಲುಪಿದೆ. ಈಗಾಗಲೇ ಅಲ್ಲೆ ಕಾಲೇಜುಗಳ ಬಳಿ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಅತ್ಯಂತ ದೊಡ್ಡ ಮಟ್ಟದಲ್ಲಿ ಈ ವಿವಾದ ನಡೆಯುತ್ತಿದೆ. ಇದರ ಬೆನ್ನಲ್ಲೇ ಪರಿಸ್ಥಿತಿ ಹತ್ತಿಕ್ಕಲು ಖಾಕಿ ಶ್ರಮ ವಹಿಸುತ್ತಿದೆ.

ರಾಯಚೂರಿನ ಸಿಂಧನೂರಿನಲ್ಲಿ ಹಿಜಾಬ್‌ ಪರ/ವಿರೋಧ ಪ್ರತಿಭಟನಗಳು ನಡೆದಿವೆ. ಹಿಜಾಬ್‌ ಬೆಂಬಲಿಸಿ ನೀಲಿ ಶಾಲು ಹಾಗೂ ಕೇಸರಿ ಸಾಲು ಧರಿಸಿ ಪ್ರಯಿಭಟನೆ ನಡೆಸುತ್ತಿದ್ದ 18ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ.  ಕೇಸರಿ, ನೀಲಿ ಸಾಲು ಧರಿಸಿ ಬಂದ ಹದಿನೆಂಟು ವಿದ್ಯಾರ್ಥಿಗಳು  ಜೈ ಶ್ರೀರಾಮ್‌, ಜೈ ಭೀಮ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಎಚ್ಚೆತ್ತ ಖಾಕಿ(police) ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ನೂ ಶಿವಮೊಗ್ಗದಲ್ಲಿ(Shivamogga) ಕಲ್ಲು ತೂರಾಟ ನಡೆಸಿ ವಿದ್ಯಾರ್ಥಿಗಳು ರಸ್ತೆಗಿಳಿದ್ರು. ಹಾಗಾಗಿ ನಗರದಾದ್ಯಂತ 144ಸೆಕ್ಷನ್‌ ಜಾರಿ ಮಾಡಿದ್ದಾರೆ. ಪರಿಸ್ಥಿತಿ ಹತೋಟಿಗೆ ತರಲು ತಹಶೀಲ್ದಾರ್(Tahsildar) ಈ ಕ್ರಮವನ್ನು ಅನುಸರಿಸಿದ್ದಾರೆ. 144ಸೆಕ್ಷನ್‌ ಜಾರಿ ಮಾಡಿ ಆದೇಶ ಹೊರಡಿಸಿ ತಹಶೀಲ್ದಾರ್‌ ನಾಗರಾಜ್‌ ಆದೇಶ. ನಗರದಲ್ಲಿ ವಿದ್ಯಾರ್ಥಿಗಳು ಗುಂಪುಗೂಡುವಿಕೆ, ಪ್ರತಿಭಟನೆ ನಡೆಸುವಿಕೆ ಎಲ್ಲದಕ್ಕೂ ಬ್ರೇಕ್‌ ಹಾಕಿದ್ದಾರೆ.

Share Post