National

ಕೇಂದ್ರ ಸರ್ಕಾರ ನೀಡಿದ Z ಕ್ಯಾಟಗರಿ ಭದ್ರತೆ ತಿರಸ್ಕರಿಸಿದ ಅಸಾದುದ್ದೀನ್ ಒವೈಸಿ

ದೆಹಲಿ: ಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಕೇಂದ್ರ ಸರ್ಕಾರ ನೀಡಿದ್ದ Z ಕೆಟಗರಿ ಭದ್ರತೆಯನ್ನು ತಿರಸ್ಕರಿಸಿದ್ದಾರೆ. ಸಂಸತ್ತಿನ ಕಲಾಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿ, ಅಸಾದುದ್ದೀನ್ ಅವರ ಜೀವಕ್ಕೆ ಅಪಾಯವಿದೆ ಎಂದು ಕೇಂದ್ರ ಭದ್ರತಾ ಪಡೆಗಳಿಂದ ಮಾಹಿತಿ ಬಂದಿದೆ. ಹಾಗಾಗಿ ಕೇಂದ್ರದಿಂದ  ನೀಡುವ Z ಕೆಟಗರಿ ಭದ್ರತೆಯನ್ನು ಪಡೆದುಕೊಳ್ಳಬೇಕಾಗಿ ಸಲಹೆ ನೀಡಿದ್ರು.

ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಓವೈಸಿ, ಗೃಹ ಸಚಿವ ಅಮಿತ್ ಶಾ ಅವರು Z ಕ್ಯಾಟಗರಿ ಭದ್ರತೆಯನ್ನು ನೀಡಿದ್ದಾರೆ.   CAA ಪ್ರತಿಭಟನೆಯಲ್ಲಿ ಪ್ರಾಣ ಕಳೆದುಕೊಂಡ 22 ಜನರಿಗಿಂತ ನನ್ನ ಜೀವನ  ಹೆಚ್ಚೇನಲ್ಲ ಎಂದರು. ನಾನು ಸ್ವೇಚ್ಛ ಜೀವಿ ಹಾಗೆ ಬದುಕಬೇಕೆಂದಿದ್ದೇನೆ ಹಾಗೆ ಇರಲು ಬಿಡಿ ಎಂದು ಮನವಿ ಮಾಡಿಕೊಂಡಿದ್ದಾರೆ.  ಮೌಲ್ಯಯುತವಾಗಿಲ್ಲ. ಅವರು ಮುಕ್ತವಾಗಿದ್ದಾರೆ ಮತ್ತು ತಿನ್ನಲು ಬಯಸಿದ್ದರು ಎಂದು ಅವರು

ಸಂಸತ್ತಿನಲ್ಲಿ ಮಾತನಾಡಿದ ಕೇಂದ್ರ ಸಚಿವ ಅಮಿತ್ ಶಾ, ಓವೈಸಿ ಬೆಂಗಾವಲು ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆಯ ಕುರಿತು ಯುಪಿ ಸರ್ಕಾರದಿಂದ ವರದಿಯನ್ನು ತೆಗೆದುಕೊಳ್ಳಲಾಗಿದೆ. ಅದರಲ್ಲಿ ಒವೈಸಿ ಅವರು ತಮ್ಮ ಪ್ರವಾಸದ ಬಗ್ಗೆ ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಿಲ್ಲವೆಂದು ಸದನದಲ್ಲಿ ಮಾಹಿತಿ ನೀಡಿದ್ದಾರೆ.

ಮೀರತ್‌ನಿಂದ ದೆಹಲಿಗೆ ತೆರಳುವ ಮಾರ್ಗದಲ್ಲಿ ಛಜಾರ್ಸಿ ಟೋಲ್ ಪ್ಲಾಜಾದಲ್ಲಿ ಗುಂಡಿನ ದಾಳಿ ನಡೆದಿದೆ. ಒವೈಸಿ ಬೆಂಗಾವಲು ಕಾರಿಗೆ ಮೂರು ಗುಂಡುಗಳು ತಗುಲಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 307 ರ ಅಡಿಯಲ್ಲಿ ಇಬ್ಬರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಘಟನೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

Share Post