Crime

ಬಿಜೆಪಿ ಶಾಸಕನ ಬ್ಲ್ಯಾಕ್‌ ಮೇಲ್‌ ಪ್ರಕರಣ; ಶಾಸಕನ ವಿರುದ್ಧ ಮಹಿಳೆ ಕಿಡಿ

ಬೆಂಗಳೂರು: ಬಿಜೆಪಿ ಶಾಸಕ ರಾಜ್‌ಕುಮಾರ್‌ ತೇಲ್ಕೂರ್‌ ಅವರು ಮಗು ತಮ್ಮದೇ ಎಂದು ಒಪ್ಪಿಕೊಂಡಿದ್ದಾರೆ. ಹೀಗಾಗಿ ನನ್ನ ಮಗುವಿಗೆ ನ್ಯಾಯ ಬೇಕು ಎಂದು ಸಂತ್ರಸ್ತ ಮಹಿಳೆ ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ವಕೀಲ ಜಗದೀಶ್‌ ಜೊತೆ ಸುದ್ದಿಗೋಷ್ಠಿ ನಡೆಸಿದ ಮಹಿಳೆ, ಚಿಕ್ಕಂದಿನಿಂದ ಶಾಸಕರು ನನ್ನ ಸ್ನೇಹಿತರು. ಅವರು ಮಗುವನ್ನು ನನ್ನದೇ ಎಂದು ಈಗಾಗಲೇ ಒಪ್ಪಿಕೊಂಡಿದ್ದಾರೆ. ಖಾಸಗಿ ಹೋಟೆಲ್‌ನಲ್ಲಿ ಈ ಬಗ್ಗೆ ಅವರು ಹೇಳಿದ್ದರು ಕೂಡಾ ಎಂದು ಹೇಳಿದರು.

ನಾನು ಸಿಎಂಗೆ ಟ್ವೀಟ್‌ ಮಾಡಿದ್ದರಿಂದ ನಿನ್ನೆ ಕೆಲವು ಬಿಜೆಪಿ ಕಾರ್ಯಕರ್ತರು ಬಂದು ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ. ಕಾಂಗ್ರೆಸ್‌ನವರು ನನ್ನ ಮೂಲಕ ಶಾಸಕರ ಮೇಲೆ ಆರೋಪ ಮಾಡಿಸುತ್ತಿದ್ದಾರೆ ಎಂದು ಹೇಳು ಎಂದು ಒತ್ತಡ ಹಾಕುತ್ತಿದ್ದಾರೆಂದು ಆರೋಪಿಸಿದರು.

ಶಾಸಕರು ನನ್ನ ವಿರುದ್ಧ ಬ್ಲ್ಯಾಕ್‌ ಮೇಲ್‌ ಆರೋಪ ಮಾಡಿದ್ದಾರೆ. ನಿನ್ನೆ ವಿಧಾನಸೌಧ ಪೊಲೀಸರ ನನ್ನನ್ನು ಕರೆದುಕೊಂಡು ಹೋಗಿ ಇಡೀ ದಿನ ಠಾಣೆಯಲ್ಲಿ ಕೂಡಿಹಾಕಿದ್ದರು. ರಾತ್ರಿ ೯ ಗಂಟೆಗೆ ಠಾಣೆಯಿಂದ ಹೊರಬಿಟ್ಟರು. ಈಗಲೂ ಕೂಡಾ ನನ್ನ ಮನೆ ಬಳಿ ಪೊಲೀಸರಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

 

Share Post