National

ಮೋದಿ ಭದ್ರತೆಗಾಗಿ 8ಸಾವಿರ ಮಂದಿ ಪೊಲೀಸ್‌ ನಿಯೋಜಿಸಿದ ತೆಲಂಗಾಣ ಸರ್ಕಾರ

ತೆಲಂಗಾಣ: ಮುಚ್ಚಿಂತಲ್‌ನಲ್ಲಿ ಜೈ ಶ್ರೀಮನ್ನಾರಾಯಣ ಜಯಘೋಷ ಮೊಳಗುತ್ತಿವೆ. ಯಾಗಶಾಲೆ ಹಾಗೂ ಸಮತಾಮೂರ್ತಿ ದರ್ಶನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಹರಿದು ಬರುತ್ತಿರುವುದರಿಂದ ಆಧ್ಯಾತ್ಮಿಕ ವೈಭವ ಮೆರೆದಿದೆ. ತ್ರಿದಂಡಿ ಚಿನ್ನ ಜೀಯರ್ ಸ್ವಾಮಿ ನೇತೃತ್ವದಲ್ಲಿ ಸಾವಿರಾರು ವಿದ್ವಾಂಸರು ಧಾರ್ಮಿಕ ವಿಧಿ ವಿಧಾನ ನೆರವೇರಿಸುತ್ತಿದ್ದಾರೆ.

ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ತೆ ಮಾಡಲಾಗಿದೆ.  ಸಿಎಸ್‌ ಸೋಮೇಶ್‌ ಕುಮಾರ್‌ ಭದ್ರತಾ ವ್ಯವಸ್ಥೆಯನ್ನು ಕೂಲಂಕುಷವಾಗಿ ಪರಿಶೀಲಿಸಿದ್ದಾರೆ. ಪ್ರಧಾನಿ ಮೋದಿ ಅವರು ಸಮತಾಪುರದಲ್ಲಿ ಮೂರು ಗಂಟೆಗಳ ಕಾಲ ಇರುತ್ತಾರೆ. ಕಾರ್ಕ್ರಮ ಮುಗಿದ ಬಳಿಕ ಮೇಲೆ ಪ್ರಧಾನಿ ಮೋದಿ ರಾತ್ರಿ 8.00 ಗಂಟೆಗೆ ದೆಹಲಿಗೆ ಮರಳಲಿದ್ದಾರೆ. ಹಾಗಾಗಿ ಪ್ರಧಾನಿ ಮೋದಿಯವರು ಮುಚ್ಚಿಂತಾಲ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ಸುಮಾರು 8 ಸಾವಿರ ಪೊಲೀಸ್ ಸಿಬ್ಬಂದಿಯನ್ನು ಭದ್ರತಾ ವ್ಯವಸ್ಥೆಗೆ ನಿಯೋಜನೆ ಮಾಡಲಾಗಿದೆ ಎಂದು ಡಿಜಿಪಿ ಮಹೇಂದರ್ ರೆಡ್ಡಿ ತಿಳಿಸಿದ್ದಾರೆ. ಭದ್ರತೆಯ ಕಾರಣದಿಂದ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದ್ರು.

ಪ್ರಧಾನಿ ನರೇಂದ್ರ ಮೋದಿ ತೆಲಂಗಾಣ ಪ್ರವಾಸದ ವೇಳೆ ರಾಜ್ಯ ಸರ್ಕಾರ ಕಂಡು ಕೇಳರಿಯದೆ ಭದ್ರತಾ ವ್ಯವಸ್ಥೆ ಮಾಡಿದೆ.  ಶನಿವಾರ ಮಧ್ಯಾಹ್ನ 2 ಗಂಟೆಗೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಬೇಗಂಪೇಟೆ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಇಕ್ರಿಸ್ಯಾಟ್‌ಗೆ ಮಧ್ಯಾಹ್ನ 2:45 ಕ್ಕೆ ಆಗಮಿಸಿ ಸುವರ್ಣ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ. ಆ ಬಳಿಕ ರಾಮಾನುಜಾಚಾರ್ಯರು ಸಹಸ್ರಮಾನೋತ್ಸವದಲ್ಲಿ ಪಾಲ್ಗೊಳ್ಳಲು ಹೆಲಿಕಾಪ್ಟರ್‌ನಲ್ಲಿ ಮುಚ್ಚಿಂತಲ್‌ಗೆ ಬರಲಿದ್ದಾರೆ.

ಇತ್ತೀಚೆಗಷ್ಟೇ ಪಂಜಾಬ್ ನಲ್ಲಿ ಪ್ರಧಾನಿ ಭದ್ರತಾ ಲೋಪವುಂಟಾಗಿದ್ದು ದೇಶಾದ್ಯಂತ ಸಂಚಲನ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ಮೋದಿ ಅವರ ಹೈದರಾಬಾದ್ ಭೇಟಿಯನ್ನು ಅಧಿಕಾರಿಗಳು ಪ್ರತಿಷ್ಠೆಯ ಕಣವಾಗಿ ತೆಗೆದುಕೊಂಡಿದ್ದಾರೆ. ಭದ್ರತೆಗಾಗಿ ಎಂಟು ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಈಗಾಗಲೇ ಪ್ರಧಾನಿಯವರ ಭದ್ರತಾ ವ್ಯವಸ್ಥೆಗಳ ಮೇಲ್ವಿಚಾರಣೆ ನಡೆಸುತ್ತಿರುವ ಎಸ್‌ಪಿಜಿ ಅಧಿಕಾರಿಗಳು ರಾಜ್ಯ ಪೊಲೀಸರೊಂದಿಗೆ ಹಲವು ಬಾರಿ ಸಭೆ ನಡೆಸಿದ್ದಾರೆ. ಪ್ರಧಾನಮಂತ್ರಿಯವರ ಭೇಟಿಯ ಮಾರ್ಗದಲ್ಲಿ ಅಡ್ವಾನ್ಸ್ ಸೆಕ್ಯುರಿಟಿ ಲೈಸೆನ್ಸ್ (ಎಎಸ್ಎಲ್)  ಪ್ರಾರಂಭವಾಗಿದೆ. ಮುಚ್ಚಿಂತಲ್‌ ಪ್ರದೇಶ ಪೂರ್ತಿ ಅಷ್ಟಭುಜಾಕೃತಿಯ ದಿಗ್ಬಂಧನ ಹೇರಲಾಗಿದೆ.

ಪ್ರಧಾನ ಮಂತ್ರಿಗಳು ಇಕ್ರಿಶಾಟ್‌ನಿಂದ ಹೆಲಿಕಾಪ್ಟರ್ ಮೂಲಕ ಸಂಜೆ 5.15 ಕ್ಕೆ ದೇಗುಲವನ್ನು ತಲುಪಲಿದ್ದಾರೆ. ಸಂಜೆ 5.30ರಿಂದ 6ರವರೆಗೆ ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಾಮಾನುಜರ ಪ್ರತಿಮೆಯನ್ನು ಜಗತ್ತಿಗೆ ಪರಿಚಯಿಸಲಿದ್ದಾರೆ.  ನಂತರ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಲಿದ್ದಾರೆ. ವಾಪಸಾತಿಯಲ್ಲಿ ಪ್ರಧಾನಿ 13 ಕಿ.ಮೀ. ರಸ್ತೆ ಮೂಲಕ ಶಂಶಾಬಾದ್ ವಿಮಾನ ನಿಲ್ದಾಣಕ್ಕೆ ಬರಬೇಕಿದೆ. ಆ ಸಮಯದಲ್ಲಿ ಆ ರಸ್ತೆ ಮಾರ್ಗ ಬಂದ್‌ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಈಗಾಗಲೇ ತಿಳಿಸಿದ್ದಾರೆ.

 

Share Post