ಸಿಎಂ ದೆಹಲಿ ಪ್ರವಾಸ ಬೆನ್ನಲ್ಲೇ: ಸಚಿವಾಕಾಂಕ್ಷಿಗಳ ರೇಸ್ನಲ್ಲಿ ಶಾಸಕರು..!
ಬೆಂಗಳೂರು: ಫೆಬ್ರವರಿ 7ರಂದು ಬಜೆಟ್ ಮೇಲಿನ ಮೂರ್ವಭಾವಿ ಸಭೆ ರದ್ದಾಗಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಸೋಮವಾರ ದೆಹಲಿಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಮೀಟಿಂಗ್ ಕ್ಯಾನ್ಸಲ್ ಆಗಿದೆ. ದೆಹಲಿಯಲ್ಲಿ ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಹಿನ್ನೆಲೆ ರಾಜ್ಯದ ಹಲವು ಶಾಸಕರು ಸಚಿವಾಕಾಂಕ್ಷಿಗಳ ರೇಸ್ನಲ್ಲಿದ್ದಾರೆ.
ಸಿಎಂ ದೆಹಲಿ ಪ್ರವಾಸ ನಿಗದಿಯಾಗುತ್ತಿದ್ದಂತೆ ಸಚಿವಾಕಾಂಕ್ಷಿಗಳು ಚುರುಕಾಗಿದ್ದಾರೆ. ದೆಹಲಿಗೆ ತರಳುವ ಸಿದ್ಧತೆಯಲ್ಲಿ ಹಲವು ಶಾಸಕರಿದ್ದಾರೆ ಎಂಬ ಮಾಹಿತಿಯಿದೆ. ಕನಿಷ್ಠ ಹದಿನೇಳು ಸಚಿವರನ್ನು ಬದಲಿಸಬೇಕೆಂಬ ಒತ್ತಾಯ ಇದೆ. ಜಾತಿ, ಪ್ರಾದೇಶಿಕತೆ ಆಧಾರದಲ್ಲಿ ಅವಕಾಶ ನೀಡುವ ವಿಚಾರ ಕೇಳಿ ಬಂದಿರುವ ಹಿನ್ನೆಲೆಯಲ್ಲಿಹಲವು ಬಿಜೆಪಿ ಶಾಸಕರು ಸಚಿವ ಸ್ಥಾನದ ರೇಸ್ನಲ್ಲಿದ್ದಾರೆ.
ದಾವಣಗೆರೆ-ಎಂ.ಪಿ.ರೇಣುಕಾಚಾರ್ಯ
ಚಿಕ್ಕಮಗಳೂರು, ಮೂಡಿಗೆರೆ-ಎಂ.ಪಿ.ಕುಮಾರಸ್ವಾಮಿ
ಬೆಳಗಾವಿಯ ಗೋಕಾಕ್-ರಮೇಶ್ ಜಾರಕಿಹೊಳಿ
ಮೈಸೂರಿನ ಕೃಷ್ಣರಾಜ ಕ್ಷೇತ್ರ- ಎಸ್.ಎ.ರಾಮದಾಸ್
ವಿಜನಗರ ಹರಪನಹಳ್ಳಿ-ಕರುಣಾಕರ ರೆಡ್ಡಿ
ಬಳ್ಳಾರಿ ನಗರ ಕ್ಷೇತ್ರ- ಸೋಮಶೇಖರ್ ರೆಡ್ಡಿ
ಕಾರವಾರ-ರೂಪಾಲಿ ನಾಯ್ಕ್
ಉ.ಕನ್ನಡದ ಕುಮಟಾ-ದಿನಕರ್ ಶೆಟ್ಟಿ
ಚಿತ್ರದುರ್ಗ ಹಿರಯೂರು-ಪೂರ್ಣಿಮಾ ಶ್ರೀನಿವಾಸ್
ಕೊಡಗಿನ ವಿರಾಜಪೇಟೆ-ಕೆ.ಜಿ.ಬೋಪಯ್ಯ
ಕೊಡಗಿನ ಮಡಿಕೇರಿ-ಅಪ್ಪಚ್ಚು ರಂಜನ್
ಯಲಹಂಕ ಶಾಸಕ- ಎಸ್.ಆರ್.ವಿಶ್ವನಾಥ್ ಸಚಿವ ಸ್ಥಾನದ ಆಕಾಂಕ್ಷಿಗಳ ರೇಸ್ನಲ್ಲಿದ್ದಾರೆ.