BengaluruPolitics

ಚನ್ನಪಟ್ಟಣಕ್ಕೆ ನಿಖಿಲ್‌ ಕುಮಾರಸ್ವಾಮಿ ಅಭ್ಯರ್ಥಿ!; ಘೋಷಣೆ ಬಾಕಿ

ಬೆಂಗಳೂರು; ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ನಿಖಿಲ್‌ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿಯಾಗೋದು ಬಹುತೇಕ ಖಚಿತವಾಗಿದೆ.. ಘೋಷಣೆಯೊಂದೇ ಬಾಕಿ ಇರೋದು.. ನಾಳೆ ಈ ಬಗ್ಗೆ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ..

ಜೆಡಿಎಸ್‌ನಿಂದ ಸ್ಪರ್ಧೆ ಮಾಡುವಂತೆ ಯೋಗೇಶ್ವರ್‌ಗೆ ಆಫರ್‌ ನೀಡಲಾಗಿತ್ತು ಎನ್ನಲಾಗಿದೆ.. ಆದ್ರೆ ಇದಕ್ಕೆ ಯೋಗೇಶ್ವರ್‌ ಒಪ್ಪಿಲ್ಲ.. ಬಿಜೆಪಿ ಅಭ್ಯರ್ಥಿಯಾಗಿ ಮಾತ್ರ ಸ್ಪರ್ಧೆ ಮಾಡುತ್ತೇನೆ ಎಂದಿದ್ದಾರೆ ಎನ್ನಲಾಗಿದೆ.. ಈ ಹಿನ್ನೆಲೆಯಲ್ಲಿ ಜೆಡಿಎಸ್‌ ಚನ್ನಪಟ್ಟಣದಲ್ಲಿ ನಿಖಿಲ್‌ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸೋದಕ್ಕೆ ಅಂತಿಮ ತೀರ್ಮಾನ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.. ಆದ್ರೆ ಇನ್ನೂ ಯಾರೂ ಅಧಿಕೃತ  ಮಾಡಿಲ್ಲ..

ಆದ್ರೆ ಸಿ.ಪಿ.ಯೋಗೇಶ್ವರ್‌ ತಮ್ಮ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಾರೆ.. ಈ ಬಗ್ಗೆ ಅವರೇ ಅಧೀಕೃತವಾಗಿ ಹೇಳಿದ್ದಾರೆ.. ಇದರ ಜೊತೆಗೆ ಮಾತನಾಡುವಾಗ ಜೆಡಿಎಸ್‌ ಜಿಲ್ಲಾಧ್ಯಕ್ಷರು ನನಗೆ ಕರೆ ಮಾಡಿದ್ದರು, ನಿಖಿಲ್‌ ಕುಮಾರಸ್ವಾಮಿಯವರನ್ನು  ನಿಲ್ಲಿಸಲು ತೀರ್ಮಾನ ಆಗಿದೆ ಎಂದರು.. ನಾನು ಒಳ್ಳೆಯದಾಗಲಿ ಎಂದಿದ್ದೇನೆ ಎಂದು ಯೋಗೇಶ್ವರ್‌ ಹೇಳಿದ್ದಾರೆ.. ಹೀಗಾಗಿ ಡಿ.ಕೆ.ಸುರೇಶ್‌ ಹಾಗೂ ನಿಖೀಲ್‌ ಕುಮಾರಸ್ವಾಮಿ ನಡುವೆ ಫೈಟ್‌ ಬಹುತೇಕ ಫಿಕ್ಸ್‌ ಆದಂತಾಗಿದೆ..

ಒಂದು ವೇಳೆ ಕೊನೇ ಸಮಯದಲ್ಲಿ ಯೋಗೇಶ್ವರ್‌ ಕಾಂಗ್ರೆಸ್‌ ಸೇರಿ ಅಲ್ಲಿಂದ ಟಿಕೆಟ್‌ ಪಡೆದರೆ, ಯೋಗೇಶ್ವರ್‌ ಹಾಗೂ ನಿಖಿಲ್‌ ನಡುವೆ ಫೈಟ್‌ ನಡೆಯಲಿದೆ.. ಯೋಗೇಶ್ವರ್‌ ಪಕ್ಷೇತರರಾಗಿ ಸ್ಪರ್ಧೆ ಮಾಡಿದರೆ ತ್ರಿಕೋನ ಸ್ಪರ್ಧೆ ಏರ್ಪಡಲಿದೆ..

Share Post