Lifestyle

ಬಾದಾಮಿ ಸೇವಿಸಿ, ದೇಹದಲ್ಲಿನ ಕೆಟ್ಟ ಕೊಬ್ಬನ್ನು ಕರಗಿಸಿ

ಬಾದಾಮಿಯು ಅತ್ಯಂತ ಪೌಷ್ಟಿಕ ದ್ವಿದಳ ಧಾನ್ಯಗಳಲ್ಲಿ ಒಂದಾಗಿದೆ. ಬಾದಾಮಿಯನ್ನು ನೆನೆಸಿ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬಾದಾಮಿಯಲ್ಲಿ ಫೈಬರ್, ಮೆಗ್ನೀಸಿಯಮ್, ಒಮೆಗಾ 3 ಕೊಬ್ಬಿನಾಮ್ಲಗಳು ಮತ್ತು ಪ್ರೊಟೀನ್‌ಗಳು ಅಧಿಕವಾಗಿವೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಉತ್ತಮ ಪೋಷಣೆಯಾಗಿದೆ. ಇದರಲ್ಲಿರುವ ಮೊನೊಸಾಚುರೇಟೆಡ್ ಕೊಬ್ಬುಗಳು ಹೊಟ್ಟೆ ತುಂಬಿದಂತಾಗುತ್ತದೆ. ಇದರಿಂದ ಹೆಚ್ಚು ಆಹಾರ ಸೇವಿಸದೆ ನೀವು ಸುಲಭವಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ಬೆಳಿಗ್ಗೆ ನೆನೆಸಿದ ಬಾದಾಮಿ ಸೇವಿಸುವುದರಿಂದ  ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ.  ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಬಾದಾಮಿ ತಿನ್ನುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ದೇಹಕ್ಕೆ ಅಗತ್ಯವಾದ ಶಕ್ತಿ, ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸುತ್ತದೆ.

ಬಾದಾಮಿಯಲ್ಲಿ ಮೆಗ್ನೀಸಿಯಮ್ ಅಧಿಕವಾಗಿರುವುದರಿಂದ ಮೈಗ್ರೇನ್ ತಲೆನೋವನ್ನು ನಿವಾರಿಸಬಹುದು. ಬಾದಾಮಿಯಲ್ಲಿ ವಿಟಮಿನ್ ಬಿ2 ಸಮೃದ್ಧವಾಗಿದೆ. ಹೀಗಾಗಿ 400 ಮಿಲಿಗ್ರಾಂ ಬಾದಾಮಿಗಳನ್ನು ಆಗಾಗ್ಗೆ ಸೇವಿಸುವುದರಿಂದ ಮೈಗ್ರೇನ್ ಆವರ್ತನ ಕಡಿಮೆಯಾಗುತ್ತದೆ.

ಬಾದಾಮಿಯನ್ನು ನೆನೆಸಿ ಮತ್ತು ಸಿಪ್ಪೆ ಸುಲಿದು, ನುಣ್ಣಗೆ ರುಬ್ಬಿ ಕಾಯಿಸಿದ ನೀರು ತಣ್ಣಗಾದ ಬಳಿಕ ಹಾಲಿನಂತೆ ಕಕದಡಿ ಮಿಶ್ರಣ ಮಾಡಿ.  ಹಸುವಿನ ಹಾಲಿನಿಂದ ಅಲರ್ಜಿ ಉಂಟಾಗುವವರೆಗೆ ಈ ಹಾಲನ್ನು ನೀಡುವುದರಿಂದ ಅವರಿಗೆ ಸಂಪೂರ್ಣ ಆಹಾರ ದೊರೆತಂತಾಗುತ್ತದೆ. ಬಾದಾಮಿಯಲ್ಲಿರುವ ಖನಿಜ ಲವಣಗಳಿಂದಾಗಿ ಇದು ಉತ್ತಮ ಟಾನಿಕ್ ಆಗಿ ಕೆಲಸ ಮಾಡುತ್ತದೆ. ಹೊಸ ರಕ್ತ ಕಣಗಳನ್ನು ವೃದ್ಧಿ ಮಾಡುತ್ತದೆ. ಇದು ದೇಹದಲ್ಲಿನ ಮೆದುಳು, ಹೃದಯ,  ನರಗಳು, ಸ್ನಾಯುಗಳು ಮತ್ತು ಮನಸ್ಸಿನ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಹೊಟ್ಟೆಯ ಸುತ್ತ ಸೇರಿಕೊಂಡಿರುವ ಕೊಬ್ಬನ್ನು ಕರಗಿಸಲು ಬಯಸುವವರು ಕನಿಷ್ಠ ಆರು ವಾರಗಳ ಕಾಲ ಬಾದಾಮಿ ಸೇವಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ಬಾದಾಮಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಪ್ರತಿದಿನ ಬಾದಾಮಿ ತಿನ್ನುವವರಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಶೇಕಡಾ 40 ರಷ್ಟು ಕಡಿಮೆಯಾಗುತ್ತದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ಬಾದಾಮಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗುವುದು. ಕೆಲವೊಮ್ಮೆ ಇದು ಮಧುಮೇಹ ಮತ್ತು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಇಂತಹ ಸಮಸ್ಯೆಗಳನ್ನು ತಡೆಯಲು ಬಾದಾಮಿ ಸೇವನೆಯೇ ಪರಿಹಾರ ಎನ್ನುತ್ತಾರೆ ಸಂಶೋಧಕರು. ಬಾದಾಮಿ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಮೂಲಕ ತಾಯಿಯ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ.

Share Post