ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ 91.5 ರೂ. ಇಳಿಕೆ
ನವದೆಹಲಿ: ಬಜೆಟ್ ಮಂಡನೆಗೂ ಮುನ್ನವೇ ವಾಣಿಜ್ಯ ಎಲ್ಪಿಜಿ ಅಡುಗೆ ಅನಿಲ ಬಳಸುವವರಿಗೆ ಸಿಹಿ ಸುದ್ದಿ ಸಿಕ್ಕಿದೆ. ವಾಣಿಜ್ಯ ಬಳಕೆಯ 19 ಕೆಜಿ ಎಲ್ಪಿಜಿ ಸಿಲಿಂಡರ್ ರಿಫಿಲ್ ಬೆಲೆಯಲ್ಲಿ 91.5 ರೂಪಾಯಿ ಇಳಿಕೆ ಮಾಡಿ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಕೆಲ ತಿಂಗಳುಗಳಿಂದ ಎಲ್ಪಿಜಿ ಬೆಲೆ ಏರಿಕೆಯಾಗುತ್ತಲೇ ಇತ್ತು. ಇದೀಗ ಬೆಲೆಯಲ್ಲಿ ಭಾರಿ ಇಳಿಕೆಯಾಗಿರುವುದು, ವಾಣಿಜ್ಯ ಬಳಕೆ ಅಡುಗೆ ಅನಿಲ ಖರೀದಿಸುವವರಿಗೆ ಖುಷಿ ತರಿಸಿದೆ.
ಇನ್ನೊಂದೆಡೆ ವಿಮಾನ ಇಂಧನದ ಬೆಲೆಯನ್ನು ಇಂದು ಏರಿಕೆ ಮಾಡಲಾಗಿದೆ. ವಿಮಾನ ಇಂದನದ ಬೆಲೆಯಲ್ಲಿ ಶೇ. 8.5ರಷ್ಟು ಏರಿಕೆ ಮಾಡಲಾಗಿದೆ. ಇದರಿಂದಾಗಿ ವಿಮಾನ ಪ್ರಯಾಣ ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.