Health

India Covid Update : 24ಗಂಟೆಯಲ್ಲಿ 2.09 ಲಕ್ಷ ಹೊಸ ಸೋಂಕು

ನವದೆಹಲಿ : ಮೂರನೇ ಅಲೆಯು ತನ್ನ ಆರ್ಭಟವನ್ನು ತಗ್ಗಿಸಿದಂತೆ ಕಾಣಿಸುತ್ತಿದೆ.  ದೇಶಾದ್ಯಂತ 24 ಗಂಟೆ ಅವಧಿಯಲ್ಲಿ 2.09ಲಕ್ಷ ಕೋವಿಡ್‌ ಪ್ರಕರಣಗಳು ದೃಢಪಟ್ಟಿದೆ. ಇನ್ನು ಇದೇ ಅವಧಿಯಲ್ಲಿ  959 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಈಗ ಪಾಸಿಟಿವಿಟಿ ದರ ಶೇ. 15.77ರಷ್ಟಿದೆ. ಇನ್ನು 24ಗಂಟೆಯ ಅವಧಿಯಲ್ಲಿ 2,62,628  ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಸದ್ಯ ದೇಶದಲ್ಲಿ ಒಟ್ಟು 18,31,268 ಸಕ್ರಿಯ ಕೇಸ್‌ಗಳು ಇವೆ ಎಂದು ಆರೋಗ್ಯ ಸಚಿವಾಲು ತಿಳಿಸಿದೆ.

Share Post