International

ಧಗಧಗ ಉರಿದ ರೈಲ್ವೆ ಹಳಿಗಳು, ಅಧಿಕಾರಿಗಳಿಂದ ಕೃತ್ಯ: ಯಾಕೆ ಗೊತ್ತೇ..?

ಚಿಕಾಗೋ: ಅಮೆರಿಕಾದ ಚಿಕಾಗೋದಲ್ಲಿ ರೈಲ್ವೆ ಅಧಿಕಾರಿಗಳು ಹಳಿಗಳಿಗೆ ಬೆಂಕಿ ಹಚ್ಚಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದ್ಯಾಕೆ ಅಧಿಕಾರಿಗಳು ಹೀಗ್ಯಾಕೆ ಬೆಂಕಿ ಇಡುತ್ತಿದ್ದಾರೆ ಅಂದುಕೊಂಡ್ರಾ ಮುಂದೆ ಓದಿ…..

ಅಮೆರಿಕಾದ ಹಲವು ಪ್ರದೇಶಗಳಲ್ಲಿ ದಟ್ಟ ಮಂಜು ಆವರಿಸಿದೆ. ರಸ್ತೆ, ಮರ, ಗಿಡ, ಕಟ್ಟಡ ಕಂಡ ಕಂಡಲ್ಲೆಲ್ಲಾ ಮಂಜಿನ ಗಡ್ಡೆಯದ್ದೇ ಹವಾ…ಚಿಕಾಗೋ, ಮಿಚಿಗನ್, ಇಂಡಿಯಾನಾ ಪೊಲೀಸ್, ವಾಷಿಂಗ್ಟನ್ ಮತ್ತು ನ್ಯೂಯಾರ್ಕ್‌ನಲ್ಲಿ ಮೈನಸ್ ಡಿಗ್ರಿ ತಾಪಮಾನ ದಾಖಲಾಗಿದೆ. ಯುನೈಟೆಡ್ ಸ್ಟೇಟ್ಸ್ನಲ್ಲಿ ಇನ್ನೂ ಎರಡು ವಾರಗಳವರೆಗೆ ಚಳಿಯು ಮುಂದುವರಿಯುತ್ತದೆ ಎಂದು ಯುಎಸ್ ಹವಾಮಾನ ಇಲಾಖೆ ಹೇಳಿದೆ. ಯುನೈಟೆಡ್ ಸ್ಟೇಟ್ಸ್‌ನ ಕೆಲವು ಉತ್ತರದ ರಾಜ್ಯಗಳು ಡಿಸೆಂಬರ್‌ನಿಂದ ತೀವ್ರ ಚಳಿಯನ್ನು ಅನುಭವಿಸುತ್ತವೆ.ದೊಡ್ಡ ನಗರಗಳು ಸಹ ಹಿಮದಿಂದ ಆವೃತವಾಗಿವೆ. ರಸ್ತೆಗಳಲ್ಲಿ ಮೊಣಕಾಲಿನವರೆಗೆ ಮಂಜು ಕವಿದಿರುವುದರಿಂದ ವಾಹನ ಸವಾರರು ಹಾಗೂ ಜನರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ.

ಭಾರೀ ಹಿಮಪಾತಕ್ಕೆ ರೈಲು ಹಳಿಗಳು ಒಡೆಯುವ ಸಾಧ್ಯತೆಯಿದೆ. ಇಂತಹ ಸಂದರ್ಭದಲ್ಲಿ ಆ ಹಳಿಗಳ ಮೇಲೆ ರೈಲುಗಳ ಸಂಚಾರ ಅಪಾಯಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ.  ಹಳಿಗಳ ಮೇಲೆ ಒಮ್ಮೆ ಹಿಮ ಬಿದ್ದರೆ ಅದನ್ನು ತೆಗೆದುಹಾಕುವುದು ಸುಲಭದ ಕೆಲಸವಲ್ಲ. ಅದಕ್ಕಾಗಿಯೇ ರೈಲ್ವೆ ಸಿಬ್ಬಂದಿ ಹಳಿಗಳ ಮೇಲೆ ಬೆಂಕಿ ಹಚ್ಚುತ್ತಿದ್ದಾರೆ. ಬೆಂಕಿಯ ಶಾಖದಿಂದಾಗಿ ಹಳಿಗಳು ಕುಗ್ಗಿ, ರೈಲಿನ ಚಕ್ರಗಳ ಎಳೆತ ಸುಗಮವಾಗಿ ಸಾಗುತ್ತದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.  ಯುನೈಟೆಡ್ ಸ್ಟೇಟ್ಸ್‌ನ ಅತಿದೊಡ್ಡ ರೈಲು ಟರ್ಮಿನಲ್‌ಗಳಲ್ಲಿ ಒಂದಾದ ಚಿಕಾಗೋ ರೈಲು ನಿಲ್ದಾಣದ ಮೂಲಕ ಪ್ರತಿದಿನ ನೂರಾರು ರೈಲುಗಳು ಸಂಚರಿಸುತ್ತವೆ. ಹಾಗಾಗಿ ಅಪಘಾತಕ್ಕೆ ಎಡೆಮಾಡಿಕೊಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬೆಂಕಿ ಹಚ್ಚಿದ್ದಾರೆ.

Share Post