International

ಸಮುದ್ರದಲ್ಲಿ ಪತನಗೊಂಡ ಯುದ್ಧ ವಿಮಾನಕ್ಕಾಗಿ ಅಮೆರಿಕಾ-ಚೀನಾ ಪೈಪೋಟಿ

ಚೀನಾ: ದಕ್ಷಿಣ ಚೀನಾ ಸಮುದ್ರದಲ್ಲಿ ಪತನಗೊಂಡ ಯುದ್ಧ ವಿಮಾನಕ್ಕಾಗಿ ಈ ಎರಡು ದೇಶಗಳ ನೌಕಾಪಡೆ ತಂಡ ನಾಮುಂದು ತಾಮುಂದು ಎಂದು ಸಮುದ್ರದಲ್ಲಿ ಹುಡುಕಾಡ ನಡೆಸುತ್ತಿವೆ. ಇದರ ಅವಶೇಷಗಳನ್ನು ಮೊದಲು ಕಂಡುಹಿಡಿಯುವವರು ಯಾರು ಎಂಬ ಪ್ರಶ್ನೆ ಈಗ ವಿಶ್ವದ ಇತರೆ ದೇಶಗಳಲ್ಲಿ ಮೂಡಿಸೆ. ಅಷ್ಟಕ್ಕೂ ಇದರಲ್ಲಿರುವ ರೋಚಕತೆ ಏಮು ಅನ್ನೋದನ್ನ ಮುಂದೆ ಓದಿ..

ಯುಎಸ್ ನೌಕಾಪಡೆಯ ವಿಮಾನ ನೌಕೆಯಾದ ಯುಎಸ್ಎಸ್ ಕಾರ್ಲ್ ವಿನ್ಸನ್ ಸೇನಾ ಕಾರ್ಯಾಚರಣೆ ನಡೆಸುವಾಗ ತಾಂತ್ರಿಕ ಕಾರಣದಿಂದ ನೌಕೆಯಲ್ಲಿದ್ದ ಜೆಟ್ ಎಫ್35-ಸಿ ದಕ್ಷಿಣ ಚೀನಾ ಸಮುದ್ರದಲ್ಲಿ ಪತನಗೊಂಡಿದೆ. ಈ ಘಟನೆ ಜನವರಿ 24 ರಂದು ನಡೆದಿದ್ದು, ಯುದ್ದ ವಿಮಾನದಲ್ಲಿದ್ದ ಯುಎಸ್ ನೌಕಾಪಡೆಯ 7ಮಂದಿ ಸಿಬ್ಬಂದಿ ಗಾಯಗೊಂಡಿದ್ದರು.  ಎಫ್ 35-ಸಿ ವಾಹಕ ನೌಕೆ ವಿನ್ಸನ್‌ನಿಂದ ನೂರು ಕಿಲೋಮೀಟರ್‌ ದೂರದಲ್ಲಿ ಪತನಗೊಂಡಿದೆ ಎಂಬುದನ್ನು ಅಧಿಕಾರಿಗಳು ಕಂಡುಹಿಡಿದ್ದಾರೆ.  ಇನ್ನು ಹತ್ತು ದಿನಗಳಲ್ಲಿ ವಿಮಾನ ಸಂಪೂರ್ಣ ಮುಳುಗಳಿದೆ ಎಂಬುದನ್ನು ಅರಿತ ಸೇನಾ ಪಡೆ ವಿಮಾನ ಅವಶೇಷಗಳಿಗಾಗು ಹುಡುಕಾಟ ನಡೆಸಿದೆ.

ಉಭಯ ದೇಶಗಳು ಪರಸ್ಪರ ಪೈಪೋಟಿ ನಡೆಸುವ ಎಫ್35-ಸಿ ವಿಮಾನದಲ್ಲಿ ಹಲವು ವಿಶೇಷತೆಗಳಿವೆ. 1,200 mph, ಅಥವಾ ಮ್ಯಾಕ್ 1.6, F35-C ವಿಶ್ವದ ಅತ್ಯಂತ ಶಕ್ತಿಶಾಲಿ ಎಂಜಿನ್ ಹೊಂದಿದೆ. ವಿಮಾನವು ರೆಕ್ಕೆಗಳ ಮೇಲೆ ಎರಡು ಕ್ಷಿಪಣಿ ಮತ್ತು  ಒಳಭಾಗದಲ್ಲಿ ನಾಲ್ಕು ಕ್ಷಿಪಣಿಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.  ಶೂಟರ್‌ಗಳಿಗೆ ಅಗತ್ಯವಿರುವ ಮಾಹಿತಿಯನ್ನು ಪಡೆಯಲು ಸಹಾಯ ಮಾಡುವ ಸಂವೇದಕಗಳನ್ನು ಹೊಂದಿರುವ ಈ F35-C ವಿಮಾನವು ಪೈಲಟ್‌ಗಳಿಗೆ ಕ್ಷಿಪಣಿ, ಗುಂಡು ಹಾರಿಸುವ ಬಗ್ಗೆ ಮಾಹಿತಿಯನ್ನು ಕೂಡ ರವಾನಿಸುತ್ತದೆ. ಹಾಗಾಗಿಯೇ ಇದನ್ನು ಹಾರುವ ಕಂಪ್ಯೂಟರ್‌ ಎಂದು  ರಕ್ಷಣಾ ಸಲಹೆಗಾರ ಅಬ್ಬಿ ಆಸ್ಟೆನ್ ಹೆಸರಿಟ್ಟಿದ್ದಾರೆ.

ಆದರೆ ಇಲ್ಲಿ ಚೀನಾ ಮೂಗು ತೂರಿಸಿರುವ ವಿಚಾರ ಅಂದ್ರೆ ನೀರಿನಲ್ಲಿ ಯಾವುದೇ ವಸ್ತುಗಳು ಕಂಡುಬಂದರೆ, ಅವುಗಳನ್ನು ಸಾಗಿಸುವ ಹಕ್ಕು ಯಾರಿಗಾದರೂ ಇದೆ.ಅದರಲ್ಲೂ ದಕ್ಷಿಣ ಸಮುದ್ರದ ಭಾಗ ತಮ್ಮ ವ್ಯಾಪ್ತಿಯಲ್ಲಿದೆ ಎಂದು ಚೀನಾ 2016 ರಿಂದ ವಾದಿಸುತ್ತಿದೆ.  F35-C ವಿಮಾನದ ತಂತ್ರಜ್ಞಾನವನ್ನು ಚೀನಾ ಸೇನೆ ಹೊಂದಿಲ್ಲ.ಹಾಗಾಗಿ ಹೇಗಾದರೂ ಮಾಡಿ ಈ ಯುದ್ಧ ವಿಮಾನವನ್ನು ವಶಪಡಿಸಕೊಳ್ಳಲು ಶತಪ್ರಯತ್ನ ಮಾಡುತ್ತಿದೆ. ಆ ಅವಸೇಷಗಳು ತಮ್ಮ ಕೈವಶವಾದರೆ ಅಮೆರಿಕಾರ ಯುದ್ಧ ನೀತಿ, ಕೆಲ ಪ್ರಮುಖ ಮಾಹಿತಿ ಚೀನಾ ಕೈಸೇರಲಿದೆ. ಆ ಮೂಲಕ ಚೀನಾ ಬಲವರ್ಧನೆಯಾಗಲಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

ಚೀನಾ ನೌಕಾಪಡೆಯ ಕುತಂತ್ರ ಬುದ್ದಿಯ ಸಂಚನ್ನು ತಿಳಿದ ಯುಎಸ್ ನೌಕಾಪಡೆ ಎಫ್ 35-ಸಿ ವಿಮಾನದ ಅವಶೇಷಗಳನ್ನು 10 ದಿನಗಳಲ್ಲಿ ಕಂಡುಹಿಡಿಯಲು ಯುಎಸ್ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಈ ಹತ್ತು ದಿನಗಳಲ್ಲಿ ಅವಶೇಷಗಳು ದೊರೆಯದಿದ್ದರೆ  ವಿಮಾನದ “ಬ್ಲಾಕ್‌ ಬಾಕ್ಸ್” ಉಪ್ಪು ನೀರಿನಲ್ಲಿ ಮುಳುಗಿ ಅದರಲ್ಲಿರುವ ಮಾಹಿತಿ ಸಂಪೂರ್ಣವಾಗಿ ನಿಷ್ಪ್ರಯೋಜಕವಾಗಲಿದೆ ಎಂದು ರಕ್ಷಣಾ ಸಲಹೆಗಾರ ಅಬಿ ಆಸ್ಟೆನ್ ಹೇಳಿದ್ದಾರೆ. ಈಗ ಎರಡು ದೇಶಗಳ ಪೈಪೋಟಿ ಜಾಗತಿಕ ಮಟ್ಟದಲ್ಲಿ ಕುತೂಹಲ ಮೂಡಿಸಿದೆ.

Share Post