ಕೊವ್ಯಾಕ್ಸಿನ್, ಕೋವಿಶೀಲ್ಡ್ ಮುಕ್ತ ಮಾರಾಟಕ್ಕೆ ಡಿಸಿಜಿಐ ಅನುಮತಿ
ದೆಹಲಿ: ಕರೋನ ವೈರಸ್ ಸಂಪೂರ್ಣ ನಿಯಂತ್ರಣಕ್ಕೆ ತರಲು ಲಸಿಕಾ ಅಭಿಯಾನ ತ್ವರಿತ ಗತಿಯಲ್ಲಿ ನಡೆಯುತ್ತಿವೆ. ಕೆಲವು ರಾಜ್ಯಗಳಲ್ಲಿ ಮೊದಲನೇ ಡೋಸ್ 100% ಪೂರ್ಣಗೊಂಡಿದೆ. ಇನ್ನೂ ಕೆಲವು ರಾಜ್ಯಗಳಲ್ಲಿ ಡಬಲ್ ಡೋಸ್ 100% ಹತ್ತಿರದಲ್ಲಿದೆ. ಈ ನಿಟ್ಟಿನಲ್ಲಿ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ) ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಲು ಷರತ್ತುಬದ್ಧ ನಿಯಮಗಳನ್ನು ವಿಧಿಸಿ ಮಾರಾಟಕ್ಕೆ ಹಸಿರು ನಿಶಾನೆ ತೋರಿಸಿದೆ.
DCGI ಯಿಂದ ಅನುಮೋದನೆ ಪಡೆದು ಅದರ ನಿರ್ಣಯದಂತೆ ಔಷಧೀಯ ಕಂಪನಿಗಳು ಲಸಿಕೆಗಳ ಬೆಲೆಗಳನ್ನು ನಿಗದಿಪಡಿಬೇಕು. ಒಂದು ಲಸಿಕೆ ಬೆಲೆ ರೂ. 275 ನಿರ್ಧರಿಸುವ ಸಾಧ್ಯತೆಯಿದೆ ಇದೆ ಎನ್ನಲಾಗಿದೆ. ಇದಕ್ಕೆ ರೂ. 150 ಹೆಚ್ಚುವರಿ ಸೇವಾ ಶುಲ್ಕ ವಿಧಿಸುವ ಅವಕಾಶವಿದೆ ಎಂಬ ಮಾಹಿತಿ ಕೂಡ ಹರಿದಾಡುತ್ತಿದೆ. ಖಾಸಗಿ ಕಂಪನಿಯಲ್ಲಿ ಕೊವ್ಯಾಕ್ಸಿನ್ ರೂ. 1200, ಕೋವಿಶೀಲ್ಡ್ ರೂ. 780 (ಸೇವಾ ಶುಲ್ಕವನ್ನು ಒಳಗೊಂಡಂತೆ) ಬೆಲೆ ಇತ್ತು. ಎರಡು ಲಸಿಕೆಗಳನ್ನು ತುರ್ತು ಬಳಕೆಗಾಗಿ ಉಪಯೋಗಿಸುವಂತೆ ಡಿಸಿಜಿಐ ಕಳೆದ ವರ್ಷ ಜನವರಿ 3 ರಂದು ಅನುಮೋದನೆ ನೀಡಲಾಗಿತ್ತು ಎಂದು ತಿಳಿದುಬಂದಿದೆ.
ಭಾರತದಲ್ಲಿ ತಯಾರಾದ ಕೊವ್ಯಾಕ್ಸಿನ್ ಮತ್ತು ಕೋವಿ ಶೀಲ್ಡ್ ಲಸಿಕೆಗಳನ್ನು ಮುಕ್ತವಾಗಿ ಬಿಡುಗಡೆ ಮಾಡಲು ಲಸಿಕಾ ತಯಾರಕರು, ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದ (ಡಿಸಿಜಿಐ) ಅನುಮತಿ ಕೋರಿದ್ದಾರೆ. ಆದರೆ, ಮುಕ್ತ ಮಾರುಕಟ್ಟೆಯಲ್ಲಿ ಲಸಿಕೆಯ ಮೌಲ್ಯ ಎಷ್ಟು ಇರಬೇಕೆಂಬುದರ ಬಗ್ಗೆ ವರದಿ ಸಲ್ಲಿಸುವಂತೆ ಡಿಸಿಜಿಐ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರಕ್ಕೆ (ಎನ್‌ಪಿಪಿಎ) ತಿಳಿಸಿದೆ.
ಹೊಸ ರೂಪಾಂತರಗಳು ಉತ್ಪತ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಆರು ತಿಂಗಳು ಹಾಗೂ ವರ್ಷಕ್ಕೊಮ್ಮೆ ಬೂಸ್ಟರ್ ಡೋಸ್‌ಗಳನ್ನು ತೆಗೆದುಕೊಳ್ಳಬೇಕು. ಈ ಕ್ರಮದಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಲಸಿಕೆಯನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡುವುದು ಉತ್ತಮ ಎಂದು ಫಾರ್ಮಾ ಕಂಪನಿಗಳು ಅಭಿಪ್ರಾಯಪಟ್ಟಿವೆ.