Politics

5G ತರಂಗಾಂತರ ಪ್ರಶ್ನಿಸಿದ್ದ ಪ್ರಕರಣ; ನಟಿ ಜೂಹಿ ಚಾವ್ಲಾಗೆ 20 ಲಕ್ಷದಿಂದ 2 ಲಕ್ಷಕ್ಕೆ ದಂಡ ಕಡಿತ

ನವದೆಹಲಿ: 5G ತರಂಗಾಂತರ ಅನುಷ್ಠಾನದ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದ ನಟಿ ಜೂಹಿ ಚಾವ್ಲಾಗೆ ವಿಧಿಸಿದ್ದ 20 ಲಕ್ಷ ರೂಪಾಯಿ ದಂಡವನ್ನು 2 ಲಕ್ಷ ರೂಪಾಯಿಗೆ ಇಳಿಸಲಾಗಿದೆ. 2 ಲಕ್ಷ ರೂಪಾಯಿ ದಂಡ ಕಟ್ಟಲೇಬೇಕೆಂದು ದೆಹಲಿ ಹೈಕೋರ್ಟ್‌ ಜೂಹಿ ಚಾವ್ಲಾಗೆ ಸೂಚಿಸಿದೆ.

2G ತರಂಗಾಂತರ ಹಾಗೂ 4G ತರಂಗಾಂತರದಿಂದ ದೇಶದಲ್ಲಿ ಪ್ರಾಣಿ ಸಂಕುಲವೇ ನಾಶವಾಗಿದೆ. ಹೀಗಾಗಿ ಸುರಕ್ಷತೆ ಖಚಿತಪಡಿಸದೇ 5G ತರಂಗಾಂತರ ಅನುಷ್ಠಾನ ಮಾಡಬಾರದು. ಇದಕ್ಕೆ ಅವಕಾಶ ಕೊಡಬಾರದೆಂದು ಜೂಹಿ ಚಾವ್ಲಾ ಕೋರ್ಟ್‌ ಮೆಟ್ಟಿಲೇರಿದ್ದರು. 5G ತರಂಗಾಂತರದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಲಿದೆ ಎಂದು ವಾದಿಸಲಾಗಿತ್ತು. ಆದರೆ ಈ ಅರ್ಜಿ ಮಾಧ್ಯಮ ಪ್ರಚಾರ ಗಿಟ್ಟಿಸಿಕೊಳ್ಳಲ ಹಾಗೂ ಕಾನೂನನ್ನು ದುರುಪಯೋಗ ಪಡಿಸಕೊಳ್ಳಲು ಬಳಸಿಕೊಂಡಿದ್ದಾರೆ ಎಂದು ದೆಹಲಿ ಹೈಕೋರ್ಟ್ ಕಿಡಿಕಾರಿತ್ತು. ಹೀಗಾಗಿ ಅರ್ಜಿದಾರರಿಗೆ 20 ಲಕ್ಷ ರೂಪಾಯಿ ದಂಡ ವಿಧಿಸಿತ್ತು.

20 ಲಕ್ಷ ದಂಡ ವಿಧಿಸಿರುವುದನ್ನು ಪ್ರಶ್ನಿಸಿ ಜೂಹಿ ಚಾವ್ಲಾ ಕೋರ್ಟ್‌ ಮೆಟ್ಟಿಲೇರಿದ್ದರು. ದಂಡ ಪ್ರಮಾಣ ಕಡಿಮೆ ಮಾಡುವಂತೆ ಮನವಿ ಮಾಡಿದ್ದರು. ಇದಕ್ಕೆ ಒಪ್ಪಿಗೆ ಕೊಟ್ಟ ದೆಹಲಿ ಹೈಕೋರ್ಟ್‌, 20 ಲಕ್ಷ ರೂಪಾಯಿಗೆ ಬದಲಾಗಿ 2 ಲಕ್ಷ ರೂಪಾಯಿ ದಂಡ ನೀಡುವಂತೆ ಸೂಚಿಸಿದೆ.

 

 

Share Post