ತೆಲಂಗಾಣ ಮಾಜಿ ಸಿಎಂ ಕೆಸಿಆರ್ ಸೊಂಟದ ಮೂಳೆ ಮುರಿತ; ಯಶೋಧಾ ಆಸ್ಪತ್ರೆಯಲ್ಲಿ ಚಿಕಿತ್ಸೆ!
ಹೈದರಾಬಾದ್; ತೆಲಂಗಾಣ ಮಾಜಿ ಸಿಎಂ ಕೆಸಿಆರ್ ತಮ್ಮ ಫಾರ್ಮ್ಹೌಸ್ನಲ್ಲಿ ಕಾಲು ಜಾರಿಬಿದ್ದಿದ್ದಾರೆ. ಇದರಿಂದಾಗಿ ಅವರ ಸೊಂಟದ ಮೂಳೆ ಮುರಿದಿದೆ. ಈ ಕಾರಣದಿಂದ ಅವರನ್ನು ಮಧ್ಯರಾತ್ರಿ ಹೈದರಾಬಾದ್ನ ಯಶೋದಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮನೆಯಲ್ಲಿ ಪಂಚೆ ಕಾಲಿಗೆ ತಗುಲಿ ಅವರು ಕಾಲುಜಾರಿ ಬಿದ್ದಿದ್ದು, ತೀವ್ರ ಮೂಳೆ ಮುರಿತಕ್ಕೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.
ಕೆಸಿಆರ್ ಅನಾರೋಗ್ಯದ ವಿಷಯ ತಿಳಿದ ತಕ್ಷಣ ಕುಟುಂಬಸ್ಥರೆಲ್ಲಾ ಆಸ್ಪತ್ರೆಯತ್ತ ಧಾವಿಸಿದ್ದಾರೆ. ಹರೀಶ್ ರಾವ್ ಜತೆಗೆ ಕೆಟಿಆರ್ ಕುಟುಂಬ ಕೂಡ ರಾತ್ರಿ ಯಶೋದಾ ಆಸ್ಪತ್ರೆ ಬಳಿ ಆಗಮಿಸಿದ್ದು, ಬೆಳಗಿನ ಜಾವದವರೆಗೂ ಅಲ್ಲೇ ಇದ್ದರು. ವೈದ್ಯರೊಂದಿಗೆ ಮಾತನಾಡಿದ್ದಾರೆ. ಯಶೋದಾ ಆಸ್ಪತ್ರೆಯ 9ನೇ ಮಹಡಿಯಲ್ಲಿ ಕೆಸಿಆರ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ವೈದ್ಯರು ಪರೀಕ್ಷೆ ಮಾಡಿ ಹೆಲ್ತ್ ಬುಲೆಟಿನ್ ನೀಡಲಿದ್ದಾರೆ. ಸದ್ಯ ಕೆಸಿಆರ್ ಅವರ ಆರೋಗ್ಯ ಸ್ಥಿರವಾಗಿದೆ. ಬೆನ್ನುಮೂಳೆ ಮುರಿತದ ಹಿನ್ನೆಲೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.