CrimeNational

ಔಷಧಿ ಕೊಡಿಸುವ ನೆಪದಲ್ಲಿ ಬಾಲಕಿ ಮೇಲೆ ಅತ್ಯಾಚಾರಗೈದ ಕಿರಾತಕ

ದೆಹಲಿ: ಹೆತ್ತಮ್ಮನಿಗೆ ಆರೋಗ್ಯ ಸರಿಯಿಲ್ಲದ ಕಾರಣ ಔಷಧಿ ತರಲು ತೆರಳಿದ್ದ ಬಾಲಕಿ ಮೇಲೆ ಪಕ್ಕದ ಮನೆಯ ವ್ಯಕ್ತಿ ಅತ್ಯಾಚಾರ ನಡೆಸಿದ ನೀಚ ಕೃತ್ಯ ನವದೆಹಲಿಯ ಪಾಂಡವನಗರದಲ್ಲಿ ನಡೆದಿದೆ. ಜನವರಿ 22ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಸ್ವಸ್ಥವಾಗಿ ಮಂಚ ಹಿಡಿದಿದ್ದ ತನ್ನ ತಾಯಿಗೆ ಔಷಧಿ ತರಲು ಪಕ್ಕದ ಮನೆಯ ವ್ಯಕ್ತಿಯ ಸಹಾಯವನ್ನು ಬಾಲಕಿ ಕೇಳಿದ್ದಳೆ. ಇದನ್ನೇ ನೆಪಮಾಡಿಕೊಂಡು ಔಷಧಿ ಕೊಡಿಸುತ್ತೇನೆಂದು ಅತ್ಯಾಚಾರ ಎಸಗಿದ್ದಾನೆ.

ಈ ಬಗ್ಗೆ ಪಾಂಡವಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ ಬಾಲಕಿ ಹೇಳಿಕೆ ನೀಡಿದ್ದಾಳೆ. ನನ್ನ ತಾಯಿಗೆ ಆರೋಗ್ಯ ಸರಿಯಿಲ್ಲ, ನನ್ನ ತಂದೆ ಕೂಡ ಮನೆಯಲ್ಲಿರಲಿಲ್ಲ ಊರಿಗೆ ಹೋಗಿದ್ದರಿಂದ ಔಷಧ ತರಲು ಸಹಾಯ ಮಾಡುವಂತೆ ಪಕ್ಕದ ಮನೆಯ ಅರುಣ್ ಅಂಕಲ್‌ ಬಳಿ ಕೇಳಿದ್ದಕ್ಕೆ ಬಳಗೆ ಕರೆದು ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆಂದು ದೂರು ನೀಡಿದ್ದಾಳೆ. ಅಲ್ಲದೆ ಈ ಬಗ್ಗೆ ಬಾಯ್ಬಿಟ್ಟರೆ ಕೊಲ್ಲುವ ಬೆದರಿಕೆ ಕೂಡ ಹಾಕಿರುವುದಾಗಿ ಪ್ರಕರಣ ದಾಖಲಿಸಿದ್ದಾರೆ. ಘಟನೆ ನಡೆದ ಬಳಿಕ ಆರೋಪಿ ನಾಪತ್ತೆಯಾಗಿದ್ದು ಪೊಲೀಸರು ಹುಡುಕಾಟ ನಡೆಸಿದ್ದಾರೆ.

Share Post