National

ಉತ್ತರಾಖಂಡದ ಚಕ್ರತಾದಲ್ಲಿ ಹಿಮತೆರವು ಕಾರ್ಯಾಚರಣೆ

ಉತ್ತರಾಖಂಡ: ಉತ್ತರ ಭಾರತದ ಹಲವು ರಾಜ್ಯಗಳಲ್ಲಿ  ಹಿಮಪಾತಕ್ಕೆ ಜನರು ನಲುಗಿ ಹೋಗಿದ್ದಾರೆ. ಮನೆಯಿಂದ ಹೊರಬರಲಾರದಂತಹ ಸಂಕಷ್ಟ ಸ್ಥಿತಿಯಲ್ಲಿ ಅಲ್ಲಿನ ಜನ ಜೀವನ ನಡೆಸುತ್ತಿದ್ದಾರೆ. ಚಳಿಗಾಲ ಬಂದರೆ ಸಾಕು ನಡುಗುವ ಚಳಿಯಲ್ಲಿ ಮನೆಯಲ್ಲಿಯೇ ಬೆಚ್ಚಗೆ ಇರುವ ಸ್ಥಿತಿ ಏರ್ಪಾಡಾಗುತ್ತದೆ. ರಸ್ತೆಗಳ ವ್ಯವಸ್ಥೆಯಂತೂ ಹೇಳತೀರದಾಗಿರುತ್ತದೆ. ಸುಮಾರು ಐದು ಆರು ಅಡಿಗಳಷ್ಟು ಹಿಮದಿಂದ ಮುಚ್ಚಿ ಹೋಗಿರುತ್ತದೆ. ರಸ್ತೆ ಸಂಚಾರ ಅಸ್ತವ್ಯಸ್ತವಾಗಿರುತ್ತದೆ. ಹೆದ್ದಾರಿಗಳು, ಗ್ರಾಮಗಳಿಗೆ ಸಂಪರ್ಕ ಕಲ್ಸಪಸುವ ರಸ್ತೆಗಳು ಸಂಪೂರ್ಣವಾಗಿ ಹಿಂದಿಂದ ಕೂಡಿರುತ್ತವೆ. ಕಣ್ಣು ಹಾಯಿಸಿದಷ್ಟೂ ದಟ್ಟ ಮಂಜು ಮತ್ತು ಹಿಮ ಗಡ್ಡೆಗಳೇ ಕಾಣುತ್ತವೆ. ಅದೆಷ್ಟೋ ಜನ ಪ್ರವಾಸಕ್ಕೆ ತೆರಳಿ ಸಂಕಷ್ಟಕ್ಕೆ ಕೂಡ ಸಿಲುಕಿದ್ದಾರೆ.

ದಟ್ಟ ಮಂಜಿನಿಂದ ಕೂಡಿದ ಉತ್ತರಾಖಂಡದ ಚಕ್ರತಾದಲ್ಲಿ ಹಿಮತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಮರ, ಗಿಡ, ರಸ್ತೆ, ವಿದ್ಯುತ್‌ ಕಂಬ, ಎಲ್ಲದರ ಮೇಲೂ ಮಂಜು ಕವಿದಿದೆ. ಸದ್ಯಕ್ಕೆ ರಸ್ತೆ ಸಂಪೂರ್ಣವಾಗಿ ಮುಚ್ಚಿದ್ದರಿಂದ ಹಿಮತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಜೆಸಿಬಿ ಸಹಾಯದಿಂದ ರಸ್ತೆಯಲ್ಲಿ ಬಿದ್ದಿರುವ ಮಂಜನ್ನು ಪಕ್ಕಕ್ಕೆ  ಸರಿಸಿ ರಸ್ತೆ ಕಾಣುವಂತೆ, ಪ್ರಯಾಣಿಕರಿಗೆ ಅನುಕೂಲವಾಗಲು ಕೆಲಸ ಮಾಡ್ತಿದ್ದಾರೆ.

Share Post