ಚಲಿಸುವ ರೈಲು ಹತ್ತಲು ಹೋಗಿ ಕೆಳಗೆ ಬಿದ್ದ ವ್ಯಕ್ತಿ:ಜೀವ ಉಳಿಸಿದ RPF
ಮಹಾರಾಷ್ಟ್ರ: ಹುಟ್ಟು ಸಾವು ಯಾರಪ್ಪನ ಮನೆ ಸ್ವತ್ತಲ್ಲ. ಅದು ಎಲ್ಲಿ ಹೇಗೆ ಯಾವಾಗ ಬರುತ್ತೆ ಅಂಥ ಯಾರಿಗೂ ಹೇಳೋಕಾಗಲ್ಲ. ಇನ್ನೇನು ಯಾವುದೋ ಕಾರಣದಿಂದ ಅನಾಹುತ ಉಂಟಾಗುತ್ತದೆ ಎಂದಾಗ ಆಯಸ್ಸು ಗಟ್ಟಿ ಇದ್ದು, ರಕ್ಷಣೆಗಾಗಿ ಯಾರಾದ್ರೂ ಬರ್ತಾರೆ. ಇಂತಹ ಘಟನೆಗಳು ಹಲವೆಡೆ ನಡೆದಿವೆ. ಕಂಡಿದ್ದೇವೆ ಕೇಳಿದ್ದೇವೆ ಕೂಡ. ಹೆಚ್ಚಾಗಿ ರಸ್ತೆ ಮತ್ತು ರೈಲು ನಡೆದು ಹೋಗುವಾಗ, ಕೆಲಸ ಮಾಡುವಾಗ, ಅಚಾನಕ್ ಆಗಿನ ನಡೆಯುವ ಘಟನೆಗಳು ಪ್ರಾಣವನ್ನೇ ತೆಗೆಯುತ್ತವೆ.
ಅದರಂತೆ ಹೆಚ್ಚಾಗಿ ಚಲಿಸುವ ರೈಲು ಹತ್ತುವ ಸಾಹಸ ಯಾರೂ ಮಾಡುವುದಿಲ್ಲ. ಯಾಕಂದ್ರೆ ಹತ್ತೋಕೆ ಅದೇನು ಬಸ್ ಅನ್ಕೊಂಡ್ರಾ..ಸ್ವಲ್ಪ ಯಾಮಾರಿದ್ರೂ ಶಿವನ ಪಾದ ಗ್ಯಾರೆಂಟಿ. ಹೀಗೆ ಇಂದು ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.ವಸಾಯಿ ರೈಲ್ವೆ ನಿಲ್ದಾಣದಲ್ಲಿ ಚಲಿಸುವ ರೈಲಿಗೆ ಹತ್ತಲು ಹೋಗಿ ವ್ಯಕ್ತಿಯೊಬ್ಬ ಪ್ಲಾಟ್ಫಾರಂ ಕೆಳಗೆ ಬಿದ್ದಿದ್ದಾನೆ. ಆತನ ಅದೃಷ್ಟ ಚೆನ್ನಾಗಿತ್ತೇನೊ ಅಲ್ಲೇ ಇದ್ದ ರೈಲ್ವೆ ರಕ್ಷಣಾ ಪಡೆಯ ಜವಾನ್ ಆತನನ್ನು ರಕ್ಷಿಸಿದ್ದಾರೆ. ವ್ಯಕ್ತಿ ಕೆಳಗೆ ಬಿದ್ದ ಕೂಡಲೇ ಆರ್ಪಿಎಫ್ ಕೂಡಲೇ ಆತನನ್ನು ಪಕ್ಕಕ್ಕೆ ಎಳೆದುಕೊಂಡಿದ್ದಾರೆ. ಇಲ್ಲವಾದಲ್ಲಿ ಆತನ ಪ್ರಾಣ ಆ ಪ್ಲಾಟ್ಫಾರಂನಲ್ಲಿ ಕೊನೆಯಾಗುತ್ತಿದ್ದರಲ್ಲಿ ಸಂದೇಹವೇ ಇಲ್ಲ. ಈ ವಿಡಿಯೋ ಸದ್ಯಕ್ಕೆ ವೈರಲ್ ಆಗಿದೆ.
#WATCH | Maharashtra: An RPF (Railway Protection Force) jawan rescued a passenger who fell down on the railway platform while trying to board a moving train at Vasai Railway Station on 23rd January. pic.twitter.com/Pxy2u467ZJ
— ANI (@ANI) January 24, 2022