International

ಎರಡು ರೈಲುಗಳ ಮಧ್ಯೆ ಕುದುರೆ ಗಾಂಭೀರ್ಯ ಓಟ:ವಿಡಿಯೋ ವೈರಲ್

ಈಜಿಪ್ಟ್:‌ ರೈಲು ಬರುತ್ತಿರುವ ಶಬ್ದ ಕೇಳಿದ್ರೆನೆ ಭಯದಿಂದ ಕೂಗಳತೆ ದೂರದಲ್ಲಿ ನಿಲ್ಲುತ್ತೇವೆ ಆದರೆ ಈ ಕುದುರೆ ಮಾಡಿದ ಸಾಹಸ ನೋಡಿದ್ರೆ ಮೂಗಪ್ರಾಣಿಯ ಸಾಹಸ ನಿಜಕ್ಕೂ ಶ್ಲಾಘನೀಯ, ಒಂದೆಡೆ ಪ್ರಾಣ ಉಳಿಸಿಕೊಳ್ಳಬೇಕೆಂಬ ಹಂಬಲ, ಇನ್ನೊಂದೆಡೆ ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ದಾರಿ ತಪ್ಪದೇ ರಹದಾರಿಯಲ್ಲಿ ನಡೆಯುವುದನ್ನು ಈ ಕುದುರೆ ಜನರಿಗೆ ಪಾಠ ಮಾಡಿದೆ.

ಈಜಿಪ್ಟ್‌ನಲ್ಲಿ ನಡೆದಿರುವ ಈ ಘಟನೆಯನ್ನು ಐಪಿಎಸ್‌ ಅಧಿಕಾರಿ ದಿಪಾಂಶು ಕಬ್ರಾ ತನ್ನ ಟ್ವಿಟ್ಟರ್‌ ಖಾತರಯಲ್ಲಿ ಈ ವಿಡಿಯೋವನನ್ನು ಪೋಸ್ಟ್‌ ಮಾಡಿದ್ದಾರೆ. ಎರಡು ರೈಲ್ವೆ ಹಳಿಗಳ ಮೇಲೆ ರೈಲುಗಳು ಸಾಗುತ್ತಿರುವ ವೇಲೆ ಒಂದು ಕುದುರೆ ತನ್ನ ಪ್ರಾಣ ಉಳಿಸಿಕೊಳ್ಳಲು ರೈಲುಗಳ ಮಧ್ಯೆ ಓಡಿರುವ ಘಟನೆ ನಡೆದಿದೆ. ವಿಡಿಯೋವನ್ನು ಚಿತ್ರೀಕರಿಸಿದ ಪ್ರಯಾಣಿಕರು ಕುದುರೆಯ ಕ್ಷೇಮಕ್ಕಾಗಿ ಪ್ರಾರ್ಥನೆ ಮಾಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಎಲ್ಲೆಡೆ ವೈರಲ್‌ ಆಗಿರುವ ವಿಡಿಯೋವನ್ನು ಶೇರ್‌ ಮಾಡಿರುವ ಐಪಿಎಸ್‌ ಅಧಿಕಾರಿ ಈ ಕುದುರೆ ನಮಗೆ ಜೀವನದ ಸತ್ಯವನ್ನು ತಿಳಿಸಿಕೊಡುತ್ತಿದೆ ಎಂದು ಬರೆದುಕೊಂಡಿದ್ದಾರೆ. ತನ್ನ ಪ್ರಾಣ ಉಳಿಸಿಕೊಳ್ಳು ಎಷ್ಟು ಚಾಕಚಕ್ಯತೆಯಿಂದ ಒಂದೇ ಮಾರ್ಗದಲ್ಲಿ ಓಡುತ್ತಿದೆ. ಹಾಗೆಯೇ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಎದುರಿಸಿ ನಮ್ಮ ಮೇಲೆ ನಮಗೆ ಇನ್ನಷ್ಟು ನಂಬಿಕೆ, ಆತ್ಮಸ್ಥೈರ್ಯದಿಂದ ಮೂಮದೆ ಸಾಗಬೇಕೆಂದು ತಿಳಿಸಿದ್ದಾರೆ.

Share Post