Bengaluru

42 ಸಾವಿರ ಮಂದಿಗೆ ಕೊರೊನಾ ದೃಢ: 26 ಮಂದಿ ಸಾವು

ಬೆಂಗಳೂರು:  ರಾಜ್ಯದಲ್ಲಿ 24ಗಂಟೆಯಲ್ಲಿ  42,470 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದೆ. ಸೋಂಕಿನಿಂದಾಗಿ 26 ಮಂದಿ ಸಾವನ್ನಪ್ಪಿದ್ದಾರೆ. ಇಂದಿನ ಕೊರೊನಾ ಪಾಸಿಟಿವಿಟಿ ದರ ಶೇ.19.33ರಷ್ಟಿದೆ. ಬೆಂಗಳೂರಿನಲ್ಲೇ 17,266 ಮಂದಿಗೆ ಸೋಂಕು ದೃಢಪಟ್ಟಿದ್ದು,  24 ಗಂಟೆಗಳಲ್ಲಿ 2.19 ಲಕ್ಷ ಮಂದಿಗೆ ಸೋಂಕಿನ ಪರೀಕ್ಷೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ.

ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 38,563 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 3,30,447 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ.

Share Post