ʻನಾನು ಮನೆಯಲ್ಲೇ ಮದುವೆಯಾಗ್ತೀನಿ; ಪ್ಲೀಸ್ ಯಾರೂ ಬರಬೇಡಿʼ
ಚಾಮರಾಜನಗರ: ನಾನು ಮನೆಯಲ್ಲೇ ಮದುವೆಯಾಗ್ತಿದೀನಿ. ಹೀಗಾಗಿ ಪ್ಲೀಸ್ ಯಾರೂ ನನ್ನ ಮದುವೆಗೆ ಬರಬೇಡಿ. ಇದ್ದಲ್ಲಿಂದಾನೇ ಆಶೀರ್ವಾದ ಮಾಡಿ ಸಾಕು ಅಂತ ನವವಧುವೊಬ್ಬಳು ತನ್ನ ಸ್ನೇಹಿತರು, ಸಂಬಂಧಿಕರಿಗೆ ಮನವಿ ಮಾಡಿದ್ದಾಳೆ.
ಚಾಮರಾಜನಗರ ಬಳಿಯ ವಿ.ಸಿ.ಹೊಸೂರು ಗ್ರಾಮದ ಸುಷ್ಮಾ ಹಾಗೂ ಚನ್ನಪ್ಪನಪುರದ ಶ್ರೇಯಸ್ ವಿವಾಹ ಇಂದು ಮತ್ತು ನಾಳೆ ನಿಶ್ಚಯವಾಗಿದೆ. ಈಗಾಗಲೇ ಎರಡೂ ಕಡೆಯವರು ಲಗ್ನಪತ್ರಿಕೆಗಳನ್ನೂ ಹಂಚಿದ್ದಾರೆ. ಆದ್ರೆ ಕೊವಿಡ್ ಕಾರಣದಿಂದಾಗಿ ಎರಡೂ ಮನೆಯವರ ಒಪ್ಪಿಗೆ ಮೇರೆಗೆ ಮೆನೆಯಲ್ಲೇ ಸರಳವಾಗಿ ಮದುವೆ ಮಾಡಿಕೊಳ್ಳಲು ತೀರ್ಮಾನಿಸಿದ್ದಾರೆ. ಈ ಕಾರಣಕ್ಕಾಗಿ ಮೊದಲು ಬುಕ್ ಮಾಡಿದ್ದ ಕಲ್ಯಾಣ ಮಂಪಟವನ್ನೂ ಕ್ಯಾನ್ಸಲ್ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ನಾವು ಸರಳವಾಗಿ ಮದುವೆಯಾಗ್ತಿದೀವಿ. ಕೊವಿಡ್ ಇರುವುದರಿಂದ ಎಲ್ಲರ ಆರೋಗ್ಯ ಮುಖ್ಯ. ಯಾರೂ ನನ್ನ ಮದುವೆಗೆ ಬರಬೇಡಿ. ಇದ್ದಲ್ಲಿಂದಾನೇ ಆಶೀರ್ವಾದ ಮಾಡಿ ಅಂತ ವಧು ವಿಡಿಯೋವೊಂದನ್ನು ಮಾಡಿ ಎಲ್ಲರಿಗೂ ಕಳುಹಿಸಿಕೊಟ್ಟಿದ್ದಾಳೆ. ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.