FM RAINBOW ಮುಚ್ಚುವ ಹುನ್ನಾರಕ್ಕೆ ಆಕ್ರೋಶ; ಸಿಎಂಗೆ ಜಿ.ಸಿ.ಚಂದ್ರಶೇಖರ್ ಪತ್ರ
ಬೆಂಗಳೂರು: ಸರ್ಕಾರಿ ಸ್ವಾಮ್ಯದ 101.3 ಎಫ್‌ಎಂ ರೈನ್‌ಬೋ ಕನ್ನಡ ಕಾಮನಬಿಲ್ಲು ವಾಹಿನಿಯನ್ನು ಆಕಾಶವಾಣಿ ಜೊತೆ ವಿಲೀನ ಮಾಡುವ ಹುನ್ನಾರ ನಡೆಯುತ್ತಿದ್ದು, ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಆಗ್ರಹಿಸಿದ್ದಾರೆ. ಈ ಸಂಬಂಧ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದಿದ್ದಾರೆ.
101.3 ಎಫ್.ಎಂ ರೈನ್ ಬೋ ಕನ್ನಡ ಕಾಮನಬಿಲ್ಲು 20 ವರ್ಷಗಳಿಂದ ಕರ್ನಾಟಕದ ಜನರಿಗೆ ಮಾಹಿತಿ ಹಾಗು ಮನೋರಂಜನೆ ನೀಡುತ್ತಿದೆ. ಇದನ್ನು ಬೆಂಗಳೂರು ಆಕಾಶವಾಣಿಯ ಜೊತೆ ವಿಲೀನಗೊಳಿಸುವ ಹುನ್ನಾರ ನಡೆಯುತ್ತಿದೆ. ಇದರ ಬಗ್ಗೆ ಆಕಾಶವಾಣಿಯ ಹಿರಿಯ ಅಧಿಕಾರಿಗಳು ಯಾವುದೇ ವಿರೋಧ ವ್ಯಕ್ತಪಡಿಸುತ್ತಿಲ್ಲ. ಈವರೆಗೆ ದೇಶದ ಇತರೆ ಯಾವುದೇ ರಾಜ್ಯದಲ್ಲಿ ಈ ಬೆಳವಣಿಗೆಗಳು ನಡೆದಿಲ್ಲ. ಇದಕ್ಕೆ ಹೊರರಾಜ್ಯದ ಈ ನೆಲದ ಗಂಧ-ಗಾಳಿಯೇ ತಿಳಿಯದ ಕೆಲವು ಅಧಿಕಾರಿಗಳೇ ಕಾರಣ. ನಮ್ಮ ನೆಲದ ಸೊಗಡಿನ ದೇಶೀ ಎಫ್.ಎಂ ಅನ್ನು ಹಂತಹಂತವಾಗಿ ನಿರ್ನಾಮ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ತಿಳಿದು ಬಂದಿರುತ್ತದೆ.
ಹೀಗಾಗಿ ನಮ್ಮ ದೇಶಿ ಎಫ್‌ಎಂ ರೇಡಿಯೋವನ್ನು ಉಳಿಸಬೇಕು ಎಂದು ಜಿ.ಸಿ.ಚಂದ್ರಶೇಖರ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹಸಚಿವರಿಗೆ ಪತ್ರ ಬರೆದಿದ್ದಾರೆ.