CrimeNational

1.80ಕೋಟಿ ಮೌಲ್ಯದ ಗಾಂಜಾ ವಶಕ್ಕೆ: ಅಂತಾರಾಷ್ಟ್ರೀಯ ಸ್ಮಗ್ಲರ್‌ಗಳಿಗೆ ಕೋಳ

ಹೈದರಾಬಾದ್:‌ ಗಾಂಜಾ ಸ್ಮಗ್ಲಿಂಗ್‌ ಮಾಡ್ತಿದ್ದ ಆರು ಮಂದಿ ಅಂತಾರಾಷ್ಟ್ರೀಯ ಸ್ಮಗ್ಲರ್‌ಗಳನ್ನು ಪೊಲೀಸರು ಬಂಧಿಸಿರುವ ಘಟನೆ ಹೈದರಾಬಾದ್‌ನ ಸೈಬರಾಬಾದ್‌ನಲ್ಲಿ ನಡೆದಿದೆ. ಬಂಧಿತ ಆರೋಪಿಗಳಿಂದ ಪೊಲೀಸರು 1.80ಕೋಟಿ ಮೌಲ್ಯದ 800 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ. ಈ ಸ್ಮಗ್ಲಿಂಗ್‌ ಗ್ಯಾಂಗ್‌ನಲ್ಲಿ ಎಂಟು ಮಂದಿ ಸ್ಮಗ್ಲರ್‌ಗಳಿರುವುದಾಗಿ ಕಮಿಷನರ್‌ ಸ್ಟೀಫನ್‌ ರವೀಂದ್ರ ತಿಳಿಸಿದ್ದಾರೆ.

ಇಬ್ಬರು ತಪ್ಪಿಸಿಕೊಂಡಿದ್ದು, ಅವರಿಗಾಗಿ ಬಲೆ ಬೀಸಿದ್ದೇವೆ ಎಂದಿದ್ದಾರೆ. ಒಡಿಸ್ಸಾದ ಕೋರಪುಟ್‌ನಿಂದ ಮಹಾರಾಷ್ಟ್ರದ ನಾಸಿಕ್‌ಗೆ ಗಾಂಜಾ ಸಾಗಾಟ ಮಾಡುವಾಗ ಖದೀಮರು ಸಿಕ್ಕಿಬಿದ್ದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಶಂಶಾಬಾದ್‌ ಪೊಲೀಸರು ಮಿಯಾಪುರ್‌ ಪೊಲೀಸರ ಸಹಕಾರದಿಂದ ಬಂಧಿಸಿದ್ದಾರೆ. ಸುಲಭವಾಗಿ ಹಣ ಮಾಡಲು ಈ ದಾರಿಯನ್ನು ಹಿಡಿದಿರುವುದಾಗಿ ಬಂಧಿತ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ಇವರು ಒಂದು ಕೆ.ಜಿ.ಗಾಂಜಾವನ್ನಿಉ ಮೂರು ಸಾವಿರ ರೂಪಾಯಿಗಳಿಗೆ ಕೊಂಡು ಅದನ್ನು ಇಪ್ಪತ್ತು ಸಾವಿರ ರೂಪಾಯಿಗಳಿಗೆ ಮಾರಾಟ ಮಾಡ್ತಿದ್ದಾಗಿ ಮಾಹಿತಿಯಿದೆ. ಇವರ ಪ್ರಮುಖ ನಾಯಕ ವಿಕಾಸ್‌ ಜಾಧವ್‌ಗಾಗಿ ಖಾಕಿ ಹುಡುಕಾಟ ನಡೆಸುತ್ತಿದ್ದಾರೆ.

Share Post