ನನ್ನ ಶಿಫ್ಟ್ ಮುಗಿದಿದೆ, ನಾನು ಕೆಲಸ ಮಾಡಲ್ಲ ಎಂದ ಪೈಲಟ್..ಮುಂದೇನಾಯ್ತು?
ಪಾಕಿಸ್ತಾನ: ಜಗತ್ತಿನಾದ್ಯಂತ ಕೆಲಸ ಮಾಡುವವರಿಗೆ, ಸರ್ಕಾರಿ ಅಧಿಕಾರಿಗಳಾಗಲೀ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಾಗಲೀ, ಕಾರ್ಮಿಕರಾಗಲೀ, ಎಲ್ಲರಿಗೂ ಕೆಲಸದ ಅವಧಿಯನ್ನು ನಿಗದಿ ಮಾಡಿರುತ್ತಾರೆ. ಅವಧಿ ಮುಗಿದ ಮೇಲೆ ಕೆಲಸ ಮಾಡಲು ಬಹಳಷ್ಟು ಮೂಗು ಮುರಿಯುವದು ಸಹಜ. ಅದರಂತೆ ಪಾಕಿಸ್ತಾನದಲ್ಲಿ ನಡೆದ ಒಂದು ಘಟನೆ ಈಗ ಪ್ರಪಂಚದಾದ್ಯಂತ ಸುದ್ದಿ ಮಾಡುತ್ತಿದೆ.
ರಿಯಾದ್‌ನಿಂದ ಪಾಕ್ ರಾಜಧಾನಿ ಇಸ್ಲಾಮಾಬಾದ್‌ಗೆ ಹೊರಟಿದ್ದ ವಿಮಾನವೊಂದು ಹವಾಮಾಣ ವೈಪರೀತ್ಯದಿಂದ ತುರ್ತು ಭೂಸ್ಪರ್ಶ ಮಾಡಿತ್ತು. ಬಹಳ ಹೊತ್ತಿನ ಬಳಿಕ ಮತ್ತೆ ವಿಮಾನಯಾನ ನಡೆಸುವಂತೆ ಪೈಲೆಟ್ ಕೇಳಿದ್ರೆ, ನನ್ನ ಕೆಲಸದ ಅವಧಿ ಮುಗಿದಿದೆ. ನಾನು ವಿಮಾನವನ್ನು ಚಲಾಯಿಸವುದಿಲ್ಲ ಎಂದಿದ್ದಾರೆ. ಪಾಕಿಸ್ತಾನ ಏರ್‌ಲೈನ್ಸ್ PK-9754 ವಿಮಾನ ಸೌದಿ ಅರೇಬಿಯಾದ ದಮ್ಮಂನಲ್ಲಿ ತುರ್ತು ಲ್ಯಾಂಡ್ ಆಗಿದೆ. ಎಲ್ಲಾ ಸಮಸ್ಯೆ ಪರಿಹಾರವಾದ ಮೇಲೆ ವಿಮಾನ ನಡೆಸುವಂತೆ ಪೈಲೆಟ್ ಬಳಿ ಕೇಳಿದ್ರೆ ಆತ ನಾನು ವಿಮಾನ ಚಾಲನೆ ಮಾಡುವುದಿಲ್ಲ ಎಂದು ಹೇಳಿದ್ದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಯ್ತು.
ಕೂಡಲೇ ಏರ್‌ಪೋರ್ಟ್ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೇರೆ ವ್ಯವಸ್ಥೆಯಾಗಿರುವವರೆಗೂ ಹೊಟೇಲ್ ಒಂದರಲ್ಲಿ ಪ್ರಯಾಣಿಕರಿಗೆ ವಾಸ್ತವ್ಯಕ್ಕೆ ಏರ್ಪಾಡು ಮಾಡಿತು. ಆ ವಿಮಾನ ಚಲಾವಣೆಗೆ ಬದಲಿ ಪೈಲೆಟ್ ಹುಡುಕಾಟ ಕಾಟ ಕಾರ್ಯ ಕೂಡ ವಿಫಲಾಯಿತು. ಬೇರೆ ದಾರಿಯಿಲ್ಲದೆ. ಮತ್ತೊಂದು ವಿಮಾನದ ವ್ಯವಸ್ಥೆ ಮಾಡಿ ಅದರಲ್ಲಿ ಪ್ರಯಾಣಿಕರನ್ನು ಕಳುಹಿಸಲಾಗಿದೆ.