HealthInternational

ಬೂಸ್ಟರ್‌ ಡೋಸ್‌ ವಿಚಾರ: ಇಂದು ವಿಶ್ವ ಆರೋಗ್ಯ ಸಂಸ್ಥೆ ಸಭೆ

ಜಿನೀವಾ: ಕೋವಿಡ್–19 ಲಸಿಕೆಯ ಬೂಸ್ಟರ್‌ ಡೋಸ್‌ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ಕಾರ್ಯತಂತ್ರ ಸಲಹಾ ಸಮಿತಿ ಇಂದು ಸಭೆ ನಡೆಸಿ ಚರ್ಚಿಸಲಿದೆ. ಕೊರೊನಾ ವೈರಸ್‌ನ ರೂಪಾಂತರ ತಳಿ ಒಮಿಕ್ರಾನ್ ವಿಶ್ವದಾದ್ಯಂತ ಹರಡುತ್ತಿರುವ ಬೆನ್ನಲ್ಲೇ ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಬೂಸ್ಟರ್‌ ಡೋಸ್‌ ಅಗತ್ಯವಿದೆಯೇ..? ಬೂಸ್ಟರ್‌ ಡೋಸ್‌ ನೀಡಿದರೆ ಕೊರೋನಾ ನಿಯಂತ್ರಿಸಬಹುದೇ ಎಂಬುದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಚರ್ಚೆ ನಡೆಸಲಿದೆ.

ತಜ್ಞರ ತಂಡ ಬೂಸ್ಟರ್ ಡೋಸ್ ನೀಡುವುದರಿಂದ ಆಗಬಹುದಾದ ಪರಿಣಾಮ, ಸುರಕ್ಷತೆ, ದೇಹದಲ್ಲಿ ಸೃಷ್ಟಿಯಾಗಬಹುದಾದ ಪ್ರತಿಕಾಯಗಳು, ಇದಕ್ಕೆ ಸಂಬಂಧಿಸಿದ ಪುರಾವೆಗಳ ಬಗ್ಗೆ ಚರ್ಚೆ ನಡೆಸಲಿದೆ. ಈ ಚರ್ಚೆ ಬಳಿಕ ಬೂಸ್ಟರ್‌ ಡೋಸ್‌ ನೀಡಬೇಕೆ, ಬೇಡವೇ ಎಂಬುದರ ಕುತರಿತು ತೀರ್ಮಾನ ಕೈಗೊಳ್ಳಲಾಗುತ್ತದೆ.

Share Post