ಬೆಂಗಳೂರಿನಲ್ಲಿ ಬೆಂಕಿ ಆಕಸ್ಮಿಕ; ಧಗಧಗನೆ ಹೊತ್ತಿ ಉರಿದ ಬಿಎಂಟಿಸಿ ಬಸ್
ಬೆಂಗಳೂರು: ಚಾಮರಾಜಪೇಟೆಯ ಮಕ್ಕಳ ಕೂಟ ಬಳಿ ಬಿಎಂಟಿಸಿ ಬಸ್ಗೆ ಬೆಂಕಿ ಬಿದ್ದಿದ್ದು, ನೋಡನೋಡುತ್ತಿದ್ದಂತೆ ಇಡೀ ಬಸ್ ಸುಟ್ಟು ಕರಕಲಾಗಿದೆ. ಹೊಸಕೆರೆಹಳ್ಳಿ ಕಡೆಯಿಂದ ಕೆ.ಆರ್.ಮಾರುಕಟ್ಟೆ ಕಡೆಗೆ ತೆರಳುತ್ತಿದ್ದ ಬಸ್, ಮಕ್ಕಳಕೂಟ ಬಳಿ ಬಂದಿದೆ. ಈ ವೇಳೆ ಬಿಎಂಸಿಟಿ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದ್ರಿಂದ ಎಚ್ಚೆತ್ತ ಡ್ರೈವರ್, ಕೂಡಲೇ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಆದ್ರೆ ಬಸ್ ಮಾತ್ರ ಧಗಧಗನೆ ಉರಿದು ಸಂಪೂರ್ಣ ಕರಕಲಾಗಿದೆ.
ಬಸ್ ದೀಪಾಂಜಲಿ ನಗರ ಡಿಪೋ ಸೇರಿದ್ದು ಎಂದು ಗೊತ್ತಾಗಿದ್ದು, KA 57 F 1592 ನಂಬರ್ನ ಈ ಬಸ್ನಲ್ಲಿ ಒಟ್ಟು 40 ಪ್ರಯಾಣಿಕರಿದ್ದರು. ಬಸ್ ಚಾಲನೆ ಮಾಡುತ್ತಿದ್ದ ವೇಳೆ ಎಂಜಿನ್ನಲ್ಲಿ ಹೊಗೆ ಕಾಣಿಸಿದೆ. ಡ್ರೈವರ್ ಬಸ್ ನಿಲ್ಲಿಸಿ ಕೆಳಗಿಳಿದು ನೋಡಿದಾಗ ಬೆಂಕಿ ಹೊತ್ತಿಕೊಂಡಿರುವುದು ಕಂಡುಬಂದಿದೆ. ಕೂಡಲೇ ಡ್ರೈವರ್ ಹಾಗೂ ಕಂಡಕ್ಟರ್ ನೆರವಿನಿಂದ ಎಲ್ಲಾ ಪ್ರಯಾಣಿಕರೂ ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಬಸ್ನಲ್ಲಿದ್ದ ಫಸ್ಟ್ ಏಯ್ಡ್ ಬಾಕ್ಸ್, ಟಿಕೆಟ್ಗಳು ಹಾಗೂ ದಿನದ ಪಾಸ್ಗಳು ಬೆಂಕಿಗಾಹುತಿಯಾಗಿವೆ ಎಂದು ತಿಳಿದುಬಂದಿದೆ.