Bengaluru

ಬಿಜೆಪಿ ನಾಯಕರ ಮೇಲೆ ಕೇಸ್‌ ದಾಖಲಿಸಲು ಡಿಕೆಶಿ ಪಟ್ಟು

ಬೆಂಗಳೂರು: ಮೇಕೆದಾಟು ಪಾದಯಾತ್ರೆ ವೇಳೆ ನಮ್ಮ ಕಾಂಗ್ರೆಸ್‌ ನಾಯಕರು ಮತ್ತು ಕಾರ್ಯಕರ್ತರ ಮೇಲೆ ಅಧಿಕಾರಿಗಳು ಕೇಸ್‌ ದಾಖಲಿಸಿದ್ದಾರೆ. ಈ ಬಗ್ಗೆ ನಾನು ಸರ್ಕಾರದ ಕಾರ್ಯದರ್ಶಿ ಹಾಗೂ ಸಿಎಂ ಬಸವರಾಜ್‌ ಬೊಮ್ಮಾಯಿಯವರಿಗೂ ಪತ್ರ ಬರೆದಿದ್ದೇನೆ. ನನ್ನ ಪತ್ರಕ್ಕೆ ಅವರು ಸ್ಪಂದಿಸಿದ್ದಾರೆ. ತಪ್ಪು ಯಾರು ಮಾಡಿದ್ರೂ ತಪ್ಪೇ. ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಪ್ರಕರಣ ದಾಖಲು ಮಾಡೇ ಮಾಡ್ತೇವೆ ಎಂದಿದ್ದಾರೆ. ಒಂದು ವೇಳೆ ಕೇಸ್‌ ದಾಖಲಿಸದಿದ್ರೆ ನಾನು ಸುಮ್ಮನಿರೋದಿಲ್ಲ ಎಲ್ಲಾ ಅಧಿಕಾರಿಗಳ ವಿರುದ್ಧ ಹೋರಾಟ ಮಾಡ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ರು.

ನಮ್ಮ ಮೇಲೆ ಕ್ರಮ ಕೈಗೊಂಡಿರುವ ಎಲ್ಲಾ ಎಸ್‌ಪಿ, ಡಿಸಿ, ಡಿಎಸ್‌ಪಿ ಎಲ್ಲರೂ ನಿಯಮ ಉಲ್ಲಂಘನೆ ಮಾಡಿದ ಬಿಜೆಪಿ ನಾಯಕರ ಮೇಲೂ ಕೇಸ್‌ ದಾಖಲು ಮಾಡಬೇಕು. ಇಲ್ಲವಾದಲ್ಲಿ ನಾವು ಸುಮ್ಮನೆ ಕೂರೋದಿಲ್ಲ. ಕಾನೂನು ಪರವಾದ ಹೋರಾಟ ಮಾಡೇ ಮಾಡ್ತೇವೆ. ಲಿಸ್ಟ್‌ ತರಿಸಿಕೊಂಡು ನಮ್ಮ ಪಾದಯಾತ್ರೆಗೆ ಅಡ್ಡಿ ಮಾಡಿದವರನ್ನು ಯಾರನ್ನೂ ಬಿಡುವುದಿಲ್ಲ. ನ್ಯಾಯ ಎಲ್ಲರಿಗೂ ಒಂದೇ ನಾವು ಮಾಡಿದ್ದು ತಪ್ಪಾದ್ರೆ, ಬಿಜೆಪಿನ ನಾಯಕರು ಮಾಡುವ ಸಭೆ, ಸಮಾರಂಭ ಅವರು ನಿಯಮ ಉಲ್ಲಂಘನೆ ಮಾಡಿ ಮಾಡುವ ಕಾರ್ಯಕ್ರಮಗಳು ಕೂಡ ತಪ್ಪು. ಅವರ ವಿರುದ್ಧವೂ ಕೇಸ್‌ ನಮೂದು ಮಾಡುವಂತೆ ಈಗಾಗಲೇ ಪತ್ರ ಬರೆದಿದ್ದೇನೆ ಕ್ರಮ ಆಗುತ್ತದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ರು.

Share Post