ಬೀದಿಬದಿ ಪಾನಿಪುರಿ ತಿಂದ ಸಚಿವ; ಚುನಾವಣಾ ಗಿಮಿಕ್ ಎಂದ ಜನ
ಗಾಜಿಯಾಬಾದ್: ಉತ್ತರ ಪ್ರದೇಶದ ಆರೋಗ್ಯ ಖಾತೆ ರಾಜ್ಯ ಸಚಿವ ಅತುಲ್ ಗಾರ್ಗ್ ಬೀದಿಬದಿಯ ಅಂಗಡಿಯಲ್ಲಿ ಪಾನಿಪುರಿ ತಿಂದು ಗಮನಸೆಳೆದಿದ್ದಾರೆ. ಇಲ್ಲಿನ ನೇತಾಜಿ ರಸ್ತೆಯಲ್ಲಿ ತೆರಳುತ್ತಿದ್ದ ಸಚಿವರು ದಿಢೀರ್ ಅಂತ ಕಾರು ನಿಲ್ಲಿಸಿ, ಬೀದಿಬದಿಯ ಅಂಗಡಿಯಲ್ಲಿ ಪಾನಿಪುರಿ ಸವಿದರು. ಹಸಿವಾಗುತ್ತಿತ್ತು. ಈ ಕಾರಣದಿಂದ ಅರ್ಜೆಂಟ್ ಅಂತ ಪಾನಿಪುರಿ ತಿಂತಿದೀನಿ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಒಬ್ಬೊಬ್ಬರು ಒಂದೊಂದು ರೀತಿ ಕಮೆಂಟ್ ಮಾಡಲಾರಂಭಿಸಿದ್ದಾರೆ. ಸಚಿವರು ಇದೇ ರಸ್ತೆಯಲ್ಲಿ ಹಲವು ಬಾರಿ ಪ್ರಯಾಣಿಸಿದ್ದಾರೆ. ಆದರೆ ಒಮ್ಮೆಯೂ ಹೀಗೆ ರಸ್ತೆ ಬದಿ ನಿಲ್ಲಿಸಿ ಪಾನಿಪುರಿ ತಿಂದಿರಲಿಲ್ಲ. ಆದ್ರೆ ಅವ್ರು ಈಗ ಈ ರೀತಿ ಮಾಡುತ್ತಿರುವುದು ಚುನಾವಣಾ ಗಿಮಿಕ್ ಎಂದು ಕೆಲವರು ಹೇಳಿದ್ದಾರೆ.