CrimeDistricts

ಕಲ್ಲಿನ ಕ್ವಾರಿಯಲ್ಲಿ 250ಕೆ.ಜಿಗೂ ಅಧಿಕ ಸ್ಪೋಟಕ ಪತ್ತೆ

ಬಾಗಲಕೋಟೆ: ಜಿಲ್ಲೆಯ ಹೊನ್ನಾಕಟ್ಟಿ ಗ್ರಾಮದ ಕಲ್ಲಿನ ಕ್ವಾರಿಯಲ್ಲಿ 250ಕೆಜಿಗೂ ಅಧಿಕ ಸ್ಫೋಟಕ ಇರುವುದು ಪತ್ತೆಯಾಗಿದೆ. ಗ್ರಾಮದ ರೈತ  ಗುರುನಾಥ ಹಾದಿನಮನಿ ಎಂಬುವವರ ಹೊಲದಲ್ಲಿ ಸ್ಪೋಟಕ ಸಿಕ್ಕಿದೆ. ಘಟನೆ ಸಂಬಂಧ ಸ್ಪೋಟಕಗಳನ್ನು ಸಂಗ್ರಹಿಸಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಜುನಾಥ ಕಂಕಣಮೇಲಿ ಹಾಗೂ ವಿಜಯ್‌ ನಾರಾ ಬಂಧಿತ ಆರೋಪಿಗಳು.

ವಿಚಾರಣೆ ವೇಲೆ ಇನ್ನೂ ಹಲವರ ಹೆಸರುಗಳನ್ನು ಇಬ್ಬರು ಬಾಯ್ಬಿಟ್ಟಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಘಟನೆ ಸಂಬಂಧ ಬಾಗಲಕೋಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಜೆಲ್ಲಿ ತಯಾರು ಮಾಡಲು ಕಲ್ಲು ಕ್ವಾರಿಗಳಲ್ಲಿ ಬ್ಲಾಸ್ಟಿಂಗ್‌ ಅಗತ್ಯ. ಆದ್ರೆ ಸರ್ಕಾರದ ನಿಮಯಗಳ ವಿರುದ್ಧವಾಗಿ ಬ್ಲಾಸ್ಟಿಂಗ್‌ ಮಾಡುವ ಅನೇಕ ಪ್ರಕರಣಗಳು ನಡೆಯುತ್ತಿದೆ. ಗ್ರಾಮಗಳ ಬಳಿ ಕ್ರಷರ್‌ಗಳನ್ನು ಶುರು ಮಾಡಿ ಜನರಿಗೆ ತೊಂದರೆ ಆಗ್ತಿದೆ ಎಂದು ಅನೇಕ ಜಿಲ್ಲೆಗಳಲ್ಲಿ ದೂರುಗಳು ದಾಖಲಾಗಿವೆ. ಇದರಲ್ಲಿ ಚಿಕ್ಕಬಳ್ಳಾಪುರ ಮೊದಲನೇ ಸ್ಥಾನದಲ್ಲಿದೆ. ಹೆಚ್ಚೆಚ್ಚು ಬ್ಲಾಸ್ಟಿಂಗ್‌ ಮಾಡುವ ದುರುದ್ದೇಶದಿಂದ ಅಕ್ರಮವಾಗಿ ಸ್ಪೋಟಕಗಳನ್ನು ಸಂಗ್ರಹಿಸಿ ತಡರಾತ್ರಿ ವೇಳೆ ಕ್ರಷರ್‌ಗಳಲ್ಲಿ ಬ್ಲಾಸ್ಟಿಂಗ್‌ ಮಾಡುವ ಕೆಲಸಗಳು ಹೆಚ್ಚಾಗಿ ನಡೆಯುತ್ತಿವೆ. ಇದರ ಮೇಲೆ ಕಣ್ಣಿಟ್ಟಿರುವ ಪೊಲೀಸ್‌ ಇಲಾಖೆ ಅಕ್ರಮ ಸ್ಫೋಟಕಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ.

 

Share Post