Health

ಭರ್ಜರಿ ಆಫರ್‌; ಲಸಿಕೆ ಪಡೆದರೆ ಶೇ.25 ತೆರಿಗೆ ಕಟ್‌

ಕೋಲ್ಕತ್ತಾ: ಕೊರೊನಾ ಲಸಿಕೆ ಹಾಕಿಸಿಕೊಳ್ಳುವವರಿಗೆ ಕೋಲ್ಕತ್ತಾದ ದಮ್‌ದಮ್‌ ಪಾಲಿಕೆ ಭರ್ಜರಿ ಆಫರ್‌ ನೀಡಿದೆ. ಎರಡೂ ಡೋಸ್‌ ಲಸಿಕೆ ಹಾಕಿಸಿಕೊಂಡರೆ ಅವರು, ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆಯಲ್ಲಿ ಶೇಕಡಾ 25ರಷ್ಟು ರಿಯಾಯಿತಿ ನೀಡಲಾಗುತ್ತದೆಂದು ಪಾಲಿಕೆ ತಿಳಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ದಮ್‌ದಮ್‌ ನಗರ ಪಾಲಿಕೆ ಅಧಿಕಾರಿಗಳು, ಲಸಿಕೆ ಅಭಿಯಾನ ಚುರುಕುಗೊಳಿಸುವುದಕ್ಕಾಗಿ ಈ ಆಫರ್‌ ನೀಡಲಾಗಿದೆ. ಇದರಿಂದಲಾದರೂ ಜನ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುವಂತಾಗಲಿ ಎಂದು ಹೇಳಿದ್ದಾರೆ.

ಲಸಿಕೆ ಬಗ್ಗೆ ಕೆಲವರಿಗೆ ಭಯ ಇದೆ. ಈ ಕಾರಣಕ್ಕಾಗಿ ಅವರ ಮನೆಗಳ ಬಳಿ ಹೋದರೂ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಅಧಿಕಾರಿಗಳು ಬರುವುದನ್ನು ನೋಡಿ ಬಚ್ಚಿಟ್ಟುಕೊಳ್ಳುತ್ತಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವುದರಿಂದ ಯಾವುದೇ ತೊಂದರೆ ಇಲ್ಲ ಎಂದು ಹೇಳಿದರೂ ಜನರು ನಂಬುತ್ತಿಲ್ಲ. ಹೀಗಾಗಿ ತೆರಿಗೆ ಕಡಿತದ ಆಫರ್‌ ನೀಡಿದರೆ ಜನ ಮುಂದೆ ಬರುಬಹುದು ಎಂಬ ಲೆಕ್ಕಾಚಾರ ಅಧಿಕಾರಿಗಳದ್ದು. ಆದರೆ ಇದು ಯಾವ ರೀತಿ ವರ್ಕೌಟ್‌ ಆಗುತ್ತೋ ನೋಡಬೇಕು.

Share Post