Uncategorized

‘ಕಸ್ತೂರಿ ನಿವಾಸ’ ಕಥೆಯನ್ನು ನಟರೊಬ್ಬರು ರಿಜೆಕ್ಟ್‌ ಮಾಡಿದ್ದರು !

ಕನ್ನಡ ಚಿತ್ರರಂಗದ ಗೋಲ್ಡನ್ ಎಪಿಕ್ ಮೂವೀಸ್ ಲೀಸ್ಟ್ ಅಲ್ಲಿ ಅಗ್ರಸ್ಥಾನದಲ್ಲಿರುವ ಸಿನಿಮಾ ಅಂದರೆ ಅದು ಕಸ್ತೂರಿ ನಿವಾಸ. ಅಣ್ಣಾವ್ರ ಚಿತ್ರ ಜೀವನದಲ್ಲಿ ಕಸ್ತೂರಿ ನಿವಾಸ ಒಂದು ಮೈಲಿಗಲ್ಲು. 1971 ರಲ್ಲಿ ತೆರೆಗೆ ಬಂದ ಈ ಸಿನಿಮಾವನ್ನು ಕಲರ್ ಸಿನಿಮಾವನ್ನಾಗಿ ಮಾಡಿ ನಾಲ್ಕೈದು ವರ್ಷಗಳ ಹಿಂದ ಬಿಡುಗಡೆ ಮಾಡಿದಾಗಲೂ ಸಖತ್ತಾಗಿಯೇ ಓಡಿತ್ತು. ಇಂತಹ ಅಪರೂಪದ ಸಿನಿಮಾ ಅಣ್ಣಾವ್ರ ಪಾಲಿಗೆ ಸಿಕ್ಕಿದ್ದು ಅಚಾನಕ್ಕಾಗಿ. ಬೇರೊಬ್ಬ ನಾಯಕ ನಟ ಈ ಸಿನಿಮಾ ಮಾಡಲು ಒಪ್ಪದ ಕಾರಣ ಕಸ್ತೂರಿ ನಿವಾಸ ಅಣ್ಣಾವ್ರ ಪಾಲಾಗಿತ್ತು.

 

ಕಸ್ತೂರಿ ನಿವಾಸ ಸಿನಿಮಾದ ಮೂಲ ಕಥೆಯನ್ನು ಮಾಡಿದವರು ಜಿ.ಬಾಲಸುಬ್ರಹ್ಮಣ್ಯಂ ಅವರು. ಆಗ ಈ ಸಿನಿಮಾ ಮಾಡಲು, ನಾಯಕ ನಟನಾಗಿ ತಮಿಳಿನ ಖ್ಯಾತ ನಟ ಶಿವಾಜಿ ಗಣೇಶನ್ ಅವರಿಗೆ ಕಥೆ ಹೇಳಿದಾಗ ಅವರು ಚಿತ್ರದಲ್ಲಿ ನಾಯಕನು ಸಾಯುವ ಸನ್ನಿವೇಶ ಇದೆ ಎಂಬ ಕಾರಣಕ್ಕೆ ಅವರು ಚಿತ್ರವನ್ನು ತಿರಸ್ಕರಿಸಿದ್ದರು. ಶಿವಾಜಿ ಗಣೇಶನ್ ಸಿನಿಮಾ ರಿಜೆಕ್ಟ್ ಮಾಡಿದ ವಿಷಯ ತಿಳಿದ ಕನ್ನಡದ ನಿರ್ದೇಶಕರಾದ ಭಗವಾನ್ ಅವರು ಸಿನಿಮಾ ಕಥೆ ತುಂಬಾ ಚೆನ್ನಾಗಿದೆ, ರಾಜ್‍ಕುಮಾರ್ ಅವರು ಈ ಚಿತ್ರ ಮಾಡಿದರೆ ಯಶಸ್ಸು ಖಂಡಿತ ಎಂದು ಆಲೋಚಿಸಿದ್ದಾರೆ ಆದರೆ ಅಣ್ಣಾವ್ರು ಈ ಕಥೆ ಒಪ್ಪುವರೋ ಇಲ್ಲವೋ ಎನ್ನುವ ಅನುಮಾನ ಅವರನ್ನು ಕಾಡಿತ್ತು. ಆದರೆ ಅದು ಕೂಡಾ ಅಣ್ಣಾವ್ರ ಸಹೋದರ ವರದಪ್ಪ ಮತ್ತು ಚಿ.ಉದಯ್ ಶಂಕರ್ ಅವರ ಸಹಾಯದಿಂದ ಪರಿಹಾರವಾಯಿತು.

 

ಅನಂತರ ಆ ಕಾಲಕ್ಕೆ ಮೂಲ ಕಥೆಗೆ ಮೂವತ್ತೆಂಟು ಸಾವಿರ ರೂಪಾಯಿಗಳನ್ನು ನೀಡಿ ದೊರೆ ಭಗವಾನ್ ಅವರು ಖರೀದಿಸಿದರು. ಕನ್ನಡದಲ್ಲಿ ಕಸ್ತೂರಿ ನಿವಾಸ ಸೂಪರ್ ಹಿಟ್ ಆದ ಸುದ್ದಿ ತಿಳಿದ ಶಿವಾಜಿ ಗಣೇಶನ್ ಅವರು ಸಿನಿಮಾ ನೋಡಿ, ಅಣ್ಣಾವ್ರ ನಟನೆಯನ್ನು ಬಹಳ ಮೆಚ್ಚಿ ಕೊಂಡಾಡಿದ್ದು ಮಾತ್ರವಲ್ಲದೇ, ಯಾವ ಸಿನಿಮಾವನ್ನು ಅವರು ಮೊದಲು ಬೇಡ ಎಂದಿದ್ದರೋ ಅದೇ ಸಿನಿಮಾಕ್ಕೆ ಎರಡು ಲಕ್ಷ ರೂಪಾಯಿ ನೀಡಿ ರಿಮೇಕ್ ಹಕ್ಕನ್ನು ಪಡೆದರು. ಸಿನಿಮಾ ತಮಿಳಿನಲ್ಲಿ ಅವಂದಾನ್ ಮನಿಧನ್ ಹೆಸರಿನಲ್ಲಿ ಸಿದ್ಧವಾಗಿ ಅಲ್ಲಿಯೂ ಕೂಡಾ ಯಶಸ್ವಿಯಾಗಿತ್ತು.

 

Share Post