BengaluruTechnology

ಮಳೆ; ರೆಡ್‌, ಆರೆಂಜ್, ಯೆಲ್ಲೋ ಅಲರ್ಟ್‌ ಅಂದ್ರೆ ಏನು..?

ಬೆಂಗಳೂರು; ಮಳೆ ಹೆಚ್ಚಾಯಿತು ಅಂದ್ರೆ ಹವಾಮಾನ ಇಲಾಖೆ ಎಚ್ಚರಿಕೆ ನೀಡುತ್ತದೆ. ಮುಂಬರುವ ಭೀಕರ ಮಳೆಯ ಬಗ್ಗೆ ಎಚ್ಚರಿಗೆ ನೀಡಲು ಕಲರ್‌ಗಳನ್ನು ಬಳಸಲಾಗುತ್ತದೆ. ರೆಡ್‌ ಅಲರ್ಟ್‌, ಆರೆಂಜ್‌ ಅಲರ್ಟ್‌, ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗುತ್ತದೆ. ಈಗ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ರೆಡ್‌, ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಹಾಗಾದ್ರೆ, ರೆಡ್‌, ಆರೆಂಜ್‌, ಯೆಲ್ಲೋ ಅಲರ್ಟ್‌ ಅಂದ್ರೆ ಏನು..? ಈ ಕಲರ್‌ಗಳು ಏನನ್ನು ಸೂಚಿಸುತ್ತವೆ..? ವಿವರ ಇಲ್ಲಿದೆ.

ಮಳೆ ಬೀಳುವ ಪ್ರಮಾಣಗಳನ್ನು ಆಧರಿಸಿ ಅದಕ್ಕೆ ಕಲರ್‌ಗಳನ್ನು ನೀಡಲಾಗುತ್ತದೆ. ಅಂದರೆ ಮಳೆಯ ಪ್ರಮಾಣವನ್ನು ಕಲರ್‌ಗಳ ಮೂಲಕ ಗುರುತಿಸಲಾಗುತ್ತದೆ.

ರೆಡ್‌ ಅಲರ್ಟ್‌;

ಮುಂದಿನ 24 ಗಂಟೆಗಳ ಅವಧಿಯಲ್ಲಿ 205 ಮಿಲಿ ಮೀಟರ್‌ ಹಾಗೂ ಅದಕ್ಕಿಂತ ಹೆಚ್ಚು ಮಳೆಯಾಗುವುದಿದ್ದರೆ ಅದನ್ನು ಕೆಂಪು ಬಣ್ಣದಲ್ಲಿ ಸೂಚಿಸಲಾಗುತ್ತದೆ. ಯಾಕಂದ್ರೆ ಇಷ್ಟು ಪ್ರಮಾಣದ ಮಳೆಯಾದರೆ ಜನಸಾಮಾನ್ಯರಿಗೆ ತೊಂದರೆ ಕಟ್ಟಿಟ್ಟ ಬುತ್ತಿ. ತಗ್ಗು ಪ್ರದೇಶಗಳು ಜಲಾವೃತವಾಗುತ್ತವೆ. ಸೇತುವೆಗಳು ಕೊಚ್ಚಿಕೊಂಡು ಹೋಗುವ ಅಪಾಯವಿರುತ್ತದೆ. ಹೀಗಾಗಿ ಮುಂದಿನ 24 ಗಂಟೆಗಳಲ್ಲಿ 205 ಮಿಲಿ ಮೀಟರ್‌ಗಿಂತ ಹೆಚ್ಚು ಮಳೆಯಾಗುವುದಿದ್ದರೆ ಆ ಪ್ರದೇಶದಲ್ಲಿ ರೆಡ್‌ ಅಲರ್ಟ್‌ ಘೊಷಿಸಲಾಗುತ್ತದೆ. ಜನಕ್ಕೆ ಎಚ್ಚರಿಕೆ ಇರುವವಂತೆ ಸೂಚಿಸಲಾಗುತ್ತದೆ. ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿದ್ದರೆ ಅವರನ್ನು ಬೇರೆಡೆ ಸ್ಥಳಾಂತರ ಮಾಡಲಾಗುತ್ತದೆ.

 

ಆರೆಂಜ್‌ ಅಲರ್ಟ್‌:

ಮುಂದಿನ 24 ಗಂಟೆಗಳಲ್ಲಿ 115.6 ಮಿಲಿ ಮೀಟರ್‌ನಿಂದ 204.5 ಮಿಲಿ  ಮೀಟರ್‌ನಷ್ಟು ಮಳೆಯಾಗುವುದಿದ್ದರೆ ಅದರನ್ನು ಆರೆಂಜ್‌ ಬಣ್ಣದಲ್ಲಿ ಸೂಚಿಸಲಾಗುತ್ತದೆ. ಇಲ್ಲಿ ಕೂಡಾ ಹೆಚ್ಚಾಗಿಯೇ ಮಳೆಯಾಗುತ್ತದೆ. ಆದ್ರೆ ರೆಡ್‌ ಅಲರ್ಟ್‌ನಷ್ಟು ಭೀಕರತೆ ಇರುವುದಿಲ್ಲ. ಆರೆಂಜ್‌ ಅಲರ್ಟ್‌ ವೇಳೆಯೂ ಮನೆಗಳಿಗೆ ಹಾನಿಯಾಗುವುದು, ಗುಡ್ಡ ಕುಸಿಯುವುದು, ಬೆಳೆಗಳು ಕೊಚ್ಚಿಹೋಗುವುದು ಆಗುತ್ತದೆ. ಹೀಗಾಗಿ ಈ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗುತ್ತದೆ.

 

ಯೆಲ್ಲೋ ಅಲರ್ಟ್‌;

ಇನ್ನು ಮುಂದಿನ 24 ಗಂಟೆಗಳಲ್ಲಿ 64.5 ಮಿಲಿ ಮೀಟರ್‌ನಿಂದ 115.5 ಮಿಲಿ ಮೀಟರ್‌ ಒಳಗೆ ಮಳೆ ಬೀಳುವುದಿದ್ದರೆ ಅದಕ್ಕೆ ಯೆಲ್ಲೋ ಕಲರ್‌ ನೀಡಲಾಗುತ್ತದೆ. ಇದು ಸಾಧಾರಣ ಮಳೆಗಿಂತ ಕೊಂಚ ಜೋರು ಮಳೆಯಾಗಿರುತ್ತದೆ. ಇದರಿಂದ ದೊಡ್ಡ ಅನಾಹುತಗಳು ಸಂಭವಿಸದಿದ್ದರೂ, ಸಣ್ಣ ಪುಟ್ಟ ಹಾನಿಗಳಂತೂ ಆಗುತ್ತವೆ. ಹೀಗಾಗಿ, ಸಾಮಾನ್ಯಕ್ಕೆ ಸ್ವಲ್ಪ ಹೆಚ್ಚೇ ಮಳೆಯಾಗುವ ಪ್ರದೇಶಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಿಸಲಾಗುತ್ತದೆ.

Share Post