Bengaluru

ಶಕ್ತಿ ಯೋಜನೆ; 100 ಕೋಟಿ ದಾಟಿದ ಮಹಿಳೆಯರ ಉಚಿತ ಪ್ರಯಾಣ ಸಂಖ್ಯೆ!

ಬೆಂಗಳೂರು; ಶಕ್ತಿ ಯೋಜನೆ ಶುರುವಾಗಿ ನವೆಂಬರ್‌ 11ಕ್ಕೆ ಆರು ತಿಂಗಳಾಗಿತ್ತು. ನವೆಂಬರ್‌ 11ರ ವೇಳೆಗೆ ಸುಮಾರು 92 ಕೋಟಿ ಬಾರಿ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ದರು. ಇದೀಗ ಅದು 100 ಕೋಟಿ ದಾಟಿದೆ. ಶಕ್ತಿ ಯೋಜನೆ ಯಶಸ್ವಿಯಾಗಿ ನಡೆಯುತ್ತಿದ್ದು, ಈ ಯೋಜನೆಯಿಂದಾಗಿ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಿದೆ.

ರಾಜ್ಯ ಸರ್ಕಾರಿ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಸಾಮಾನ್ಯ ಬಸ್‌ಗಳಲ್ಲಿ ಪ್ರತಿದಿನ ಸರಾಸರಿ 60 ರಿಂದ 65 ಲಕ್ಷ ಬಾರಿ ಮಹಿಳೆಯರು ಉಚಿತವಾಗಿ ಓಡಾಡುತ್ತಿದ್ದಾರೆ. ಇದುವರೆಗೆ ಮಹಿಳೆಯರು ಉಚಿತವಾಗಿ ಓಡಾಡಿದ ಪ್ರಯಾಣದ ಟಿಕೆಟ್‌ನ ಮೌಲ್ಯ 2 ಸಾವಿರದ 397 ಕೋಟಿ 80 ಲಕ್ಷದ 11 ಸಾವಿರದ 562 ರೂಪಾಯಿ ಎಂದು ತಿಳಿದುಬಂದಿದೆ.

ಯೋಜನೆ ಶುರುವಾದಾಗಿನಿಂದ ನವೆಂಬರ್‌ 22ರವರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಒಟ್ಟು 30,12,17,350 ಬಾರಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಇದುವರೆಗೆ 32,69,60,082 ಬಾರಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ 23,37,23,007 ಬಾರಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ 14,28,55,745 ಬಾರಿ ಮಹಿಳೆಯರು ಉಚಿತವಾಗಿ ಓಡಾಡಿದ್ದಾರೆ. ಅಂದರೆ, ಇದುವರೆಗೆ ಒಟ್ಟು 100 ಕೋಟಿ 47 ಲಕ್ಷದ 56 ಸಾವಿರದ 184 ಬಾರಿ ಮಹಿಳೆಯರು ಉಚಿತವಾಗಿ ಓಡಾಡಿದ್ದಾರೆ. ಇದರ ಒಟ್ಟು ಟಿಕೆಟ್‌ ಮೌಲ್ಯ2 ಸಾವಿರದ 397 ಕೋಟಿ 80 ಲಕ್ಷದ 11 ಸಾವಿರದ 562 ರೂಪಾಯಿ ಎಂದು ಸಾರಿಗೆ ಇಲಾಖೆ ತಿಳಿಸಿದೆ.

Share Post