Science

ಚಂದ್ರನ ಮೇಲೆ ಕಾರ್ಯಾಚರಣೆ ಶುರು ಮಾಡಿದ ಪ್ರಗ್ಯಾನ್;‌ 8 ಮೀಟರ್‌ ಚಲನೆ

ಬೆಂಗಳೂರು; ನಿನ್ನೆ ವಿಕ್ರಮ್‌ ಲ್ಯಾಂಡರ್‌ನಿಂದ ಹೊರಬಂದಿರುವ ಪ್ರಗ್ಯಾನ್‌ ರೋವರ್‌ ಚಂದ್ರನ ಮೇಲೆ ತನ್ನ ಕಾರ್ಯಾಚರಣೆ ಶುರು ಮಾಡಿದೆ. ಈ ಬಗ್ಗೆ ಇಸ್ರೋ ಟ್ವೀಟ್‌ ಮಾಡಿದ್ದು, ಪ್ರಗ್ಯಾನ್‌ ಎಂಟು ಮೀಟರ್‌ ಚಲನೆ ಮಾಡಿದ್ದು, ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದೆ. 

ರೋವರ್ ಪೇಲೋಡ್‌ಗಳಾದ ಲೇಸರ್ ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್​ ಮತ್ತು ಆಲ್ಫಾ ಪಾರ್ಟಿಕಲ್ ಎಕ್ಸ್‌ರೇ ಸ್ಪೆಕ್ಟ್ರೋಮೀಟರ್​ (APXS) ಆನ್ ಮಾಡಲಾಗಿದೆ. ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್ ಮಾಡ್ಯೂಲ್ ಮತ್ತು ರೋವರ್‌ನಲ್ಲಿನ ಎಲ್ಲಾ ಪೇಲೋಡ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಟ್ವೀಟ್​ ಮೂಲಕ ಇಸ್ರೋ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

 

Share Post