Politics

ಯದುವೀರ್‌ ಬಿಜೆಪಿ ಸೇರ್ಪಡೆ ಎಫೆಕ್ಟ್‌; ಅರಮನೆ ಮೈದಾನದ ಮೇಲೆ ಸರ್ಕಾರದ ಕಣ್ಣು

ಬೆಂಗಳೂರು; ಮೈಸೂರು ಸಂಸ್ಥಾನದ ರಾಜ ವಂಶಸ್ಥ ಯದುವೀರ್‌ ಕೃಷ್ಣದತ್ತ ಪಡೆಯರ್‌ ಬಿಜೆಪಿ ಸೇರಿ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ.. ಈ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ ಸರ್ಕಾರ, ಮೈಸೂರು ಸಂಸ್ಥಾನದ ಆಸ್ತಿಗಳ ಮೇಲೆ ಕಣ್ಣು ಹಾಕಿದೆ… ಸುಪ್ರೀಂ ಕೋರ್ಟ್‌ನಲ್ಲಿರುವ ಕೇಸ್‌ಗೆ ಮರುಜೀವ ತುಂಬುವ ಬಗ್ಗೆ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ…

ಅರಮನೆ ಮೈದಾನ ಸ್ವಾಧೀನಕ್ಕೆ ಸರ್ಕಾರದ ಚಿಂತನೆ;

ಬೆಂಗಳೂರಿನಲ್ಲಿರುವ ಅರಮನೆ ಮೈದಾನ ಮೈಸೂರು ರಾಜವಂಶಸ್ಥರ ಸ್ವಾಧೀನದಲ್ಲಿದೆ… ಇದು 453 ಎಕರೆ ಜಾಗ ಹೊಂದಿದ್ದು, ಈ ಜಾಗದಲ್ಲಿ ಕಾರ್ಯಕ್ರಮಗಳು, ಮದುವೆಗಳನ್ನು ನಡೆಸುವುದಕ್ಕೆ ಬಾಡಿಗೆಗೆ ನೀಡಲಾಗುತ್ತಿದೆ.. ಆದ್ರೆ ರಾಜ್ಯ ಸರ್ಕಾರ ಈ ಹಿಂದೆ ಈ ಅರಮನೆ ಮೈದಾನದ ಜಾಗ ಸಾರ್ವಜನಿಕರದ್ದು ಎಂದು ಕಾನೂನು ತಂದಿತ್ತು.. ಹೈಕೋರ್ಟ್‌ ಕೂಡಾ ಈ ಕಾನೂನನ್ನು ಎತ್ತಿಹಿಡಿದಿತ್ತು.. ಆದ್ರೆ ಅರಮನೆಯವರು ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದಾರೆ.. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದೆ.. ಹೀಗಾಗಿ ಅರಮನೆ ಮೈದಾನ ಈಗಲೂ ಅರಮನೆಯವರ ಸ್ವಾಧೀನದಲ್ಲೇ ಇದೆ.. ಹಲವು ವರ್ಷಗಳಿಂದ ಇದೇ ಸ್ಥಿತಿ ಮುಂದುವರೆದಿದೆ.. ಆದ್ರೆ ಯಾವಾಗ ಯದುವೀರ್‌ ಅವರು ಬಿಜೆಪಿ ಸೇರಿ ಚುನಾವಣೆಗೆ ಸ್ಪರ್ಧೆ ಮಾಡುವ ತೀರ್ಮಾನ ಕೈಗೊಂಡರೋ ಈಗ ಸರ್ಕಾರ ಈ ಬಗ್ಗೆ ಚರ್ಚೆ ನಡೆಸಿದೆ.. ಗುರುವಾರ ನಡೆದ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಈ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಸುಪ್ರೀಂಕೋರ್ಟ್‌ನಲ್ಲಿರುವ ಅರ್ಜಿಯನ್ನು ಆದಷ್ಟು ಬೇಗ ಇತ್ಯರ್ಥ ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.

ಈ ಬಗ್ಗೆ ಮಾಹಿತಿ ಕೊಟ್ಟ ಸಚಿವ ಕೃಷ್ಣಬೈರೇಗೌಡ;

ಸುಪ್ರೀಂಕೋರ್ಟ್‌ನಲ್ಲಿ ಅರಮನೆಯವರ ಅರ್ಜಿ ಪರಿಗಣಿಸಿ ಯಥಾ  ಸ್ಥಿತಿ ಕಾಪಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಆದ್ರೆ ಇಷ್ಟು ದಿನ ಯಥಾಸ್ಥಿತಿ ಏಕೆ..? ಮೂಲ ಅರ್ಜಿಯ ಕಥೆ ಏನಾಯ್ತು ಎಂಬುದರ ಬಗ್ಗೆ ಸಿಎಂ ಸಿದ್ದರಾಮಯ್ಯ ಕೇಳಿದ್ದಾರೆ.. ಈ ಪ್ರಕರಣಕ್ಕೆ ಸೂಕ್ತ ವಕೀಲರನ್ನು ಕೂಡಲೇ ನೇಮಕ ಮಾಡಿ, ಸರ್ಕಾರದ ನಿಲುವಿಗೆ ಪೂರಕವಾಗಿ ಮೂಲದಾವೆ ಮುಂದುವರೆಸಬೇಕೆಂದು ಸಿಎಂ ಸೂಚನೆ ಕೊಟ್ಟಿದ್ದಾರೆ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.

ರಸ್ತೆ ಅಗಲೀಕರಣಕ್ಕೆ 15.5 ಎಕರೆ ಸ್ವಾಧೀನ;

ಇನ್ನು ನ್ಯಾಯಾಲಯದ ಆದೇಶದಂತೆ ಅರಮನೆ ಜಾಗದ ಹೊರಭಾಗದಲ್ಲಿ ರಸ್ತೆ ಅಗಲೀಕರಣಕ್ಕೆ ಟಿಡಿಆರ್‌ (ಅಭಿವೃದ್ಧಿ ಹಕ್ಕುಗಳ ವರ್ಗಾವಣೆ) ಕೊಟ್ಟು ರಸ್ತೆ ಮಾಡಲು ಸರ್ಕಾರ ಮುಂದಾಗಿತ್ತು.. ಇದಕ್ಕಾಗಿ 15.5 ಎಕರೆ ಭೂಮಿ ಸರ್ಕಾರ ವಶಪಡಿಸಿಕೊಂಡು ಕಾಂಪೌಂಡ್‌ ಹಾಕಿತ್ತು.. ಆದ್ರೆ ಇದರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾಗಿತ್ತು. ಇದೀಗ ಸಂಪುಟದಲ್ಲಿ ಚರ್ಚೆ ಮಾಡಿ ರಸ್ತೆ ಅಗಲೀಕರಣ ಮಾಡಬೇಕೆಂಬ ನಿರ್ಧಾರಕ್ಕೆ ಬರಲಾಗಿದೆ. 15.5 ಎಕರೆ ಟಿಡಿಆರ್‌ ಕೊಡಲು ತಾತ್ವಿಕ ತೀರ್ಮಾನ ತೆಗೆದುಕೊಳ್ಳಲಾಗಿದೆ. ಟಿಡಿಆರ್‌ ಯಾರಿಗೆ ಕೊಡುವುದು ಎಂಬ ಪ್ರಶ್ನೆ ಎದುರಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ರಾಜವಂಶಸ್ಥರ ಕುಟುಂಬದಲ್ಲೂ ಭೂಮಿ ಹಕ್ಕಿಗಾಗಿ ತಗಾದೆ;

ಒಂದು ಕಡೆ ಸರ್ಕಾರ ಬೆಂಗಳೂರಿನಲ್ಲಿರುವ ಅರಮನೆ ಮೈದಾನದ ಭೂಮಿ ಸಾರ್ವಜನಿಕರದ್ದೆಂದು ಕಾನೂನು ಮಾಡಿದೆ. ಇನ್ನೊಂದೆಡೆ, ಮೈಸೂರು ರಾಜ ವಂಶಸ್ಥರ ಕುಟುಂಬದಲ್ಲೂ ಈ ಜಾಗದ ವಿಚಾರವಾಗಿ ಒಂದು ತಗಾದೆ ಇದೆ.. ಅದೂ ಕೂಡಾ ಕೋರ್ಟ್‌ನಲ್ಲಿದೆ..  ಬೆಂಗಳೂರಿನ ಅರಮನೆ ಮೈದಾನದಲ್ಲಿ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್‌ ಅವರಿಗೆ ನಾಲ್ಕು ಪಾಲು, ಅವರ ಸಹೋದರಿಯರಿಗೆ ತಲಾ 28 ಎಕರೆ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಓರ್ವ ಸಹೋದರಿಯ ಪುತ್ರ ಯದುವೀರ್‌ ಯದುವೀರ್‌ ಈಗ ಮೈಸೂರು ಸಂಸ್ಥಾನದ ಪಟ್ಟಾಧಿಕಾರಿಯಾಗಿದಾರೆ. ಆದ್ರೆ ಇನ್ನು ಅವರಿಗೆ ಅರಮನೆ ಮೈದಾನದ ನೇರ ಹಕ್ಕು ಬಂದಿಲ್ಲ. ಈ ನಡುವೆ ಪಾಲು ಹಂಚಿಕೆ ವಿಚಾರದಲ್ಲಿ ಶ್ರೀಕಂಠದತ್ತ ಒಡೆಯರ್‌ ವಿರುದ್ಧ ಅವರ ಸಹೋದರಿಯರು ಹೂಡಿರುವ ಪ್ರತ್ಯೇಕ ಪ್ರಕರಣ ನ್ಯಾಯಾಲಯದಲ್ಲಿದೆ.

 

Share Post