BengaluruPolitics

ಬಿಜೆಪಿ ಲೆಕ್ಕಾಚಾರದಂತೆ ಪ್ರಜ್ವಲ್‌ ರೇವಣ್ಣ ಗೆಲ್ಲಲ್ವಾ..?; ಡಿ.ಕೆ.ಸುರೇಶ್‌ ಸೋಲೋದು ಪಕ್ಕಾನಾ..?

ಬೆಂಗಳೂರು; ಜೂನ್‌ 4ಕ್ಕೆ ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.. ಅದಕ್ಕಾಗಿ ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ.. ಇನ್ನೊಂದೆಡೆ ಇನ್ನೂ ಒಂದು ಹಂತದ ಮತದಾನ ಬಾಕಿ ಇದೆ.. ಅದಕ್ಕಾಗಿ ಕೊನೆಗೆ ಹಂತದ ಕಸರತ್ತುಗಳೂ ನಡೆಯುತ್ತಿವೆ.. ಈ ನಡುವೆ ಚುನಾವಣೆ ಮುಗಿದ ಕಡೆ ಬೂತ್‌ವಾರು ವರದಿಗಳನ್ನು ತರಿಸಿಕೊಂಡು ಯಾರು ಗೆಲ್ಲಬಹುದು, ಯಾರು ಸೋಲಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.. ರಾಜ್ಯದಲ್ಲೂ ಮೂರೂ ಪಕ್ಷಗಳಲ್ಲೂ ಇಂತಹ ಲೆಕ್ಕಾಚಾರ ಜೋರಾಗಿದೆ.. ಬಿಜೆಪಿ ಆಂತರಿಕ ಲೆಕ್ಕಾಚಾರದ ಪ್ರಕಾರ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಕೂಟಕ್ಕೆ 17 ಸ್ಥಾನಗಳು ಪಕ್ಕಾ ಬರುತ್ತವೆ ಎಂದು ಹೇಳಲಾಗುತ್ತಿದೆ.. ಹಾಸದಲ್ಲಿ ಪ್ರಜ್ವಲ್‌ ರೇವಣ್ಣ ಗೆಲ್ಲೋದು ಕಷ್ಟ ಕಷ್ಟ ಎಂದು ಹೇಳಲಾಗುತ್ತಿದೆ..

ಉತ್ತರ ಭಾಗದಲ್ಲಿ ಬಿಜೆಪಿಗೆ ಹೆಚ್ಚು ಹೊಡೆತ..!;

ಮೇ 7ರಂದು ಕರ್ನಾಟಕದಲ್ಲಿ ಎರಡನೇ ಹಂತದ ಮತದಾನ ನಡೆದಿತ್ತು.. ಉತ್ತರ ಕರ್ನಾಟಕದ 14 ಕ್ಷೇತ್ರಗಳಿಗೆ ಮತದಾನ ನಡೆದಿತ್ತು.. ಇದರಲ್ಲಿ ಬಿಜೆಪಿಗೆ ಹೆಚ್ಚು ಹೊಡೆತ ಬಿದ್ದಿದೆ ಎಂದು ಹೇಳಲಾಗುತ್ತಿದೆ.. ಹದಿನಾಲ್ಕು ಕ್ಷೇತ್ರಗಳ ಪೈಕಿ ಕೇವಲ 6 ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲುವು ಸಿಗಬಹುದು ಅಂತ ಬಿಜೆಪಿ ಆಂತರಿಕ ಮೌಲ್ಯಮಾಲಪನದಿಂದ ಗೊತ್ತಾಗಿದೆ ಎಂದು ಹೇಳಲಾಗುತ್ತಿದೆ..

ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಉತ್ತಮ ಫಲಿತಾಂಶ;

ಇನ್ನು ಏಪ್ರಿಲ್‌ 26ರಂದು ರಾಜ್ಯದಲ್ಲಿ ಮೊದಲ ಹಂತದಲ್ಲಿ ಮತದಾನ ನಡೆದಿತ್ತು.. ಹಳೇ ಮೈಸೂರು ಭಾಗದ 14 ಕ್ಷೇತ್ರಗಳಲ್ಲಿ ನಡೆದ ಮತದಾನದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಕೂಟ ಉತ್ತಮ ಪ್ರದರ್ಶನ ನೀಡಿದೆ ಎಂದು ಹೇಳಲಾಗುತ್ತಿದೆ.. ಬಿಜೆಪಿಯವರ ಲೆಕ್ಕಾಚಾರದ ಪ್ರಕಾರ ಈ 14 ಕ್ಷೇತ್ರಗಳ ಪೈಕಿ ಬಿಜೆಪಿ-ಜೆಡಿಎಸ್‌ ಅಭ್ಯರ್ಥಿಗಳು 11 ಕ್ಷೇತ್ರದಲ್ಲಿ ಗೆಲ್ಲಲಿದ್ದಾರೆ ಎಂದು ಹೇಳಲಾಗಿದೆ..

ಹೀಗಾಗಿ ಮೊದಲ ಹಂತದಲ್ಲಿ 11 ಕ್ಷೇತ್ರಗಳು, ಎರಡನೇ ಹಂತದಲ್ಲಿ 6 ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ನಂಬಲಾಗಿದೆ..

ಪ್ರಜ್ವಲ್‌ ಹಾಗೂ ಡಿ.ಕೆ.ಸುರೇಶ್‌ಗೆ ಸೋಲಾಗುತ್ತಾ..?;

ಬಿಜೆಪಿ ಆಂತರಿಕ ಲೆಕ್ಕಾಚಾರದ ಪ್ರಕಾರ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣಗೆ ಸೋಲಾಗುತ್ತೆ ಎಂದು ಹೇಳಲಾಗುತ್ತಿದೆ.. ಲೈಂಗಿಕ ಕಿರುಕುಳ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರು ಗೆಲ್ಲುವ ಭರವಸೆ ಇಲ್ಲ ಎಂದು ಹೇಳಲಾಗುತ್ತಿದೆ.. ಇತ್ತ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ.ಸಿ.ಎನ್‌.ಮಂಜುನಾಥ್‌ ಅವರು ಗೆಲ್ಲುತ್ತಾರೆ ಎಂಬ ವಿಶ್ವಾಸದಲ್ಲಿ ಬಿಜೆಪಿಯವರು ಇದ್ದಾರಂತೆ.. ಇದರಿಂದಾಗಿ ಡಿ.ಕೆ.ಸುರೇಶ್‌ ಸೋಲುತ್ತಾರೆ ಎಂದು ಹೇಳಲಾಗುತ್ತಿದೆ.. ಆದ್ರೆ ಕಾಂಗ್ರೆಸ್‌ನವರು ಮಾತ್ರ ಗ್ರಾಮಾಂತರದಲ್ಲಿ ನಾವೇ ಗೆಲ್ಲೋದು ಅನ್ನೋ ವಿಶ್ವಾಸದಲ್ಲಿದ್ದಾರೆ..

 

Share Post