ಕಾಂಗ್ರೆಸ್ ಆಫರ್ ಬಗ್ಗೆ ಯೋಗೇಶ್ವರ್ ಹೇಳೋದೇನು..?; ಪಕ್ಷಾಂತರಕ್ಕೆ ರೆಡಿಯಾದ್ರಾ..?
ಬೆಂಗಳೂರು; ಚನ್ನಪಟ್ಟಣ ಉಪಚುನಾವಣೆಯಲ್ಲಿ ಅವಕಾಶ ಸಿಗದಿದ್ದಕ್ಕೆ ಬಂಡೆದ್ದಿರುವ ಸಿ.ಪಿ.ಯೋಗೇಶ್ವರ್ ಮುಂದಿನ ನಡೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.. ಬಿಜೆಪಿ ನಾಯಕರು ಚನ್ನಪಟ್ಟಣವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದಾರೆ.. ಹೀಗಾಗಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡುವಂತೆ ಸಿಪಿವೈಗೆ ಆಫರ್ ನೀಡಲಾಗಿತ್ತು.. ಆದ್ರೆ ಅದನ್ನು ಯೋಗೇಶ್ವರ್ ನಿರಾಕರಣೆ ಮಾಡಿದ್ದರಿಂದಾಗಿ ಜೆಡಿಎಸ್ ಬಹುತೇಕ ನಿಖಿಲ್ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸೋದು ಖಚಿತವಾಗಿದೆ.. ಇತ್ತ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿಪಿವೈ ಪಕ್ಷೇತರನಾಗಿ ಸ್ಪರ್ಧೆ ಮಾಡೋದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.. ಈ ನಡುವೆ ಅವರಿಗೆ ಕಾಂಗ್ರೆಸ್‌ನಿಂದ ಆಫರ್ ಬಂದಿದೆ ಎಂದು ಹೇಳಲಾಗುತ್ತಿದೆ.. ಸಿಪಿವೈ ಕಾಂಗ್ರೆಸ್‌ಗೆ ಬಂದರೆ ಅವರನ್ನೇ ಅಭ್ಯರ್ಥಿ ಮಾಡಲು ಕಾಂಗ್ರೆಸ್ ನಾಯಕರು ಆಫರ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.. ಈ ಬಗ್ಗೆ ಸಿ.ಪಿ.ಯೋಗೇಶ್ವರ್ ಅವರ ಪ್ರತಿಕ್ರಿಕೆ ಕೂಡಾ ಕೊಟ್ಟಿದ್ದಾರೆ.. ಅವರ ಪ್ರತಿಕ್ರಿಯೆ ಅಡ್ಡಗೋಡೆ ಮೇಲೆ ದೀಪ ಇಟ್ಟಂಗಿದ್ದು, ಇದು ಮತ್ತಷ್ಟು ಚರ್ಚೆಗೆ ದಾರಿ ಮಾಡಿಕೊಟ್ಟಿದೆ..
ಕಳೆದ ರಾತ್ರಿ ಸಿ.ಪಿ.ಯೋಗೇಶ್ವರ್ ಅವರು ಖಾಸಗಿ ಮಾಧ್ಯಮದ ಮಾತನಾಡಿದ್ದಾರೆ.. ಈ ವೇಳೆ ವರದಿಗಾರ ನಿಮಗೆ ಕಾಂಗ್ರೆಸ್ ಆಫರ್ ಇದೆ ಎಂದು ಹೇಳಲಾಗುತ್ತಿದೆ.. ಈ ಬಗ್ಗೆ ಏನು ಹೇಳುತ್ತೀರಿ ಎಂದು ಪ್ರಶ್ನೆ ಮಾಡುತ್ತಾರೆ.. ಅದಕ್ಕೆ ಉತ್ತರ ಕೊಟ್ಟ ಯೋಗೇಶ್ವರ್ ಭವಿಷ್ಯದ ಮಾತುಗಳಿಗೆ ಏನು ಉತ್ತರ ಕೊಡೋಕಾಗುತ್ತೆ..? ಎಂದು ಪ್ರಶ್ನೆ ಮಾಡುತ್ತಾರೆ.. ನಾಳೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇನೆ.. ನಾಳೆ ಎಲ್ಲವನ್ನೂ ಹೇಳುತ್ತೇನೆ ಎಂದು ಹೇಳುತ್ತಾ ಹೊರಡುತ್ತಾರೆ..
ಒಟ್ಟಿನಲ್ಲಿ ಯೋಗೇಶ್ವರ್ ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡೋದು ಖಚಿತವಾಗಿದೆ.. ಅವರು ಸದ್ಯಕ್ಕೆ ನಾನು ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ.. ಆದ್ರೆ ಈ ನಡುವೆ ಕಾಂಗ್ರೆಸ್ ಅವರಿಗೆ ಗಾಳ ಹಾಕುತ್ತಿದೆ.. ಚುನಾವಣೆ ಘೋಷಣೆಗೂ ಮೊದಲು ಕೆಲ ಕಾರ್ಯಕ್ರಮಗಳಲ್ಲಿ ಡಿ.ಕೆ.ಶಿವಕುಮಾರ್ ಜೊತೆ ಯೋಗೇಶ್ವರ್ ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದರು.. ಈ ಕಾರಣದಿಂದ ಯೋಗೇಶ್ವರ್ ಕಾಂಗ್ರೆಸ್ ಸೇರಿದರೂ ಅಚ್ಚರಿ ಇಲ್ಲ.. ಯಾಕಂದ್ರೆ ಪಕ್ಷೇತರವಾಗಿ ಸ್ಪರ್ಧೆ ಮಾಡಿ ಗೆಲ್ಲೋದು ಅಷ್ಟು ಸುಲಭದ ಮಾತಲ್ಲ.. ತ್ರಿಕೋನ ಸ್ಪರ್ಧೆ ಏರ್ಪಟ್ಟರೆ ಮೂವರಿಗೂ ಕಷ್ಟವಾಗುತ್ತದೆ.. ಇನ್ನು ಯೋಗೇಶ್ವರ್‌ಗೆ ಚನ್ನಪಟ್ಟಣದಲ್ಲಿ ತನ್ನದೇ ಆದ ಮತ ಬ್ಯಾಂಕ್ ಇದೆ.. ಇದರ ಜೊತೆಗೆ ಕಾಂಗ್ರೆಸ್ ಮತಗಳು ಸೇರಿದರೆ ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸೋದು ಸುಲಭವಾಗುತ್ತದೆ.. ಹೀಗಾಗಿ ಯೋಗೇಶ್ವರ್ ಅವರು ಕಾಂಗ್ರೆಸ್ ಸೇರಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಬಹುದು ಎಂದೇ ಎಲ್ಲರೂ ಹೇಳುತ್ತಿದ್ದಾರೆ.. ಈ ಕಾರಣಕ್ಕಾಗಿ ಕಾಂಗ್ರೆಸ್ ಕೂಡಾ ತನ್ನ ಅಭ್ಯರ್ಥಿಯನ್ನು ಪ್ರಕಟಿಸದೇ ಕಾದುನೋಡುವ ತಂತ್ರಕ್ಕೆ ಮುಂದಾಗಿದೆ ಎನ್ನಲಾಗಿದೆ..