Politics

ದೇವೇಗೌಡರನ್ನು ಭೇಟಿಯಾದ ಮಾಜಿ ಸಚಿವ ರೇವಣ್ಣ; ಗೌಡರ ನಿವಾಸದ ಬಳಿ ಹೇಳಿದ್ದೇನು..?

ಬೆಂಗಳೂರು; ಹಾಸನದಲ್ಲಿ ಅಶ್ಲೀಲ ವಿಡಿಯೋಗಳ ರಿಲೀಸ್‌ ಹಿನ್ನೆಲೆಯಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಜೆಡಿಎಸ್‌ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.. ಈ ಬೆನ್ನಲ್ಲೇ ಪ್ರಜ್ವಲ್‌ ರೇವಣ್ಣ ಅವರ ತಂದೆ ಹಾಗೂ ಮಾಜಿ ಸಚಿವ ಹೆಚ್‌.ಡಿ.ರೇವಣ್ಣ ಅವರು ದೇವೇಗೌಡರು ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು.. ಇದೇ ವೇಳೆ ಪ್ರಕರಣದ ಬಗ್ಗೆ ಮಾತನಾಡಿರುವ ರೇವಣ್ಣ ಅವರು 4-5 ವರ್ಷದ ಹಳೆಯದನ್ನು ತೆಗೆದುಕೊಂಡು ಬಂದು ಕೇಸ್‌ ಹಾಕಿದ್ದಾರೆ ಎಂದು ಆರೋಪ ಮಾಡಿದ್ದಾರೆ..

ಇದನ್ನೂ ಓದಿ; ಪ್ರಿಯತಮೆಯ ತಾಯಿಯನ್ನು ಗುಂಡಿಕ್ಕಿ ಕೊಂದ 17 ವರ್ಷದ ಬಾಲಕ!

ಹಾಸನ ಪೆನ್‌ಡ್ರೈವ್‌ ವಿಚಾರ ದೇಶಾದ್ಯಂತ ಚರ್ಚೆಯಾಗುತ್ತಿದೆ.. ಹೀಗಾಗಿ ಪಕ್ಷಕ್ಕೆ ಆಗುತ್ತಿರುವ ಮುಜುಗರ ತಪ್ಪಿಸಿಕೊಳ್ಳಲು ದೇವೇಗೌಡರು, ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ.. ಈ ಬೆನ್ನಲ್ಲೇ ರೇವಣ್ಣ ಅವರು ದೇವೇಗೌಡರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.. ಅನಂತರ ಇದೇ ಮೊದಲ ಬಾರಿಗೆ ಪ್ರಕರಣದ ಬಗ್ಗೆ ರೇವಣ್ಣ ಪ್ರತಿಕ್ರಿಯೆ ನೀಡಿದರು.. ದೇವೇಗೌಡರ ಬಳಿ ಈ ಪ್ರಕರಣದ ಬಗ್ಗೆ ಯಾವುದೇ ಮಾತನಾಡಿಲ್ಲ. ನಾನು ಯಾವುದರ ಬಗ್ಗೆಯೂ ಪ್ರತಿಕ್ರಿಯೆ ಕೊಡಲ್ಲ ಎಂದು ಹೇಳಿದರು..

ಇದನ್ನೂ ಓದಿ; ಅಶ್ಲೀಲ ವಿಡಿಯೋ ವೈರಲ್‌ ಪ್ರಕರಣʼ ಜೆಡಿಎಸ್‌ನಿಂದ ಪ್ರಜ್ವಲ್‌ ಉಚ್ಛಾಟನೆ!

ಮುಂದುವರೆದು ಮಾತನಾಡಿದ ರೇವಣ್ಣ ಅವರು, ಅದು 4-5 ವರ್ಷದ ಹಳೆಯ ಪ್ರಕರಣ.. ಚುನಾವಣೆ ಸಂದರ್ಭದಲ್ಲಿ ಅದನ್ನು ಹೊರಗೆ ತಂದಿದ್ದಾರೆ.. ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿರೋದ್ರಿಂದ ಎಫ್‌ಐಆರ್‌ ಹಾಕಿ ಎಸ್‌ಐಟಿ ತನಿಖೆ ಮಾಡ್ತಿದ್ದಾರೆ.. ನಾವು ಇಂತಹ ತನಿಖೆಗಳನ್ನು ಸಾಕಷ್ಟು ಎದುರಿಸಿದ್ದೇವೆ.. ಅವರು ಕಾನೂನು ರೀತಿ ಏನಿದೆ ಅದು ಮಾಡಲಿ ಎಂದಿದ್ದಾರೆ..

Share Post