CrimePolitics

ಖುದ್ದು ಬೆಂಗಳೂರಿನ ಕೋರ್ಟ್‌ಗೆ ಹಾಜರಾಗಿ ಜಾಮೀನು ಪಡೆದ ರಾಹುಲ್‌ ಗಾಂಧಿ!

ಬೆಂಗಳೂರು; ಬಿಜೆಪಿ ಹೂಡಿದ್ದ ಮಾನನಷ್ಟ ಪ್ರಕರಣದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇಂದು ಖುದ್ದು ಬೆಂಗಳೂರಿನ ಕೋರ್ಟ್‌ಗೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದಾರೆ.. ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್‌ ರಾಹುಲ್‌ ಗಾಂಧಿಗೆ ಷರತ್ತುಬದ್ಧ ಜಾಮೀನು ನೀಡಿದ್ದು, ಮಾಜಿ ಸಚಿವ ಡಿ.ಕೆ.ಸುರೇಶ್‌ ಅವರು ರಾಹುಲ್‌ ಗಾಂಧಿಗೆ ಶ್ಯೂರಿಟಿ ನೀಡಿದ್ದಾರೆ.. ಪ್ರಕರಣದ ವಿಚಾರಣೆಯನ್ನು ಜೂನ್‌ 30ಕ್ಕೆ ಮುಂದೂಡಿಕೆ ಮಾಡಲಾಗಿದೆ..

ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ ಪಕ್ಷ ಈ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಹಲವು ಆರೋಪಗಳನ್ನು ಮಾಡಿತ್ತು.. ಅದರಲ್ಲಿ ನಲವತ್ತು ಪರ್ಸೆಂಟ್‌ ಕಮೀಷನ್‌, ಹಾಗೂ ಸಿಎಂ, ಸಚಿವ ಸ್ಥಾನಗಳಿಗಾಗಿ ಬಿಜೆಪಿ ಹೈಕಮಾಂಡ್‌ ನೂರಾರು ಕೋಟಿ ರೂಪಾಯಿ ಪಡೆದಿದೆ ಅನ್ನೋದು.. ಈ ವಿಚಾರವಾಗಿ ಪತ್ರಿಕೆಗಳನ್ನು ಜಾಹೀರಾತುಗಳನ್ನು ನೀಡಲಾಗಿತ್ತು.. ಇದರ ವಿರುದ್ಧ ಬಿಜೆಪಿ ಮಾನನನಷ್ಟ ಮೊಕದ್ದಮೆ ಹೂಡಿತ್ತು..

ವಾರದ ಹಿಂದೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಕೋರ್ಟ್‌ಗೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದರು.. ಚುನಾವಣಾ ಪ್ರಚಾರದಲ್ಲಿದ್ದರಿಂದ ರಾಹುಲ್‌ ಗಾಂಧಿ ಕೋರ್ಟ್‌ಗೆ ಹಾಜರಾಗಲು ಸಮಯ ಕೇಳಿದ್ದರು.. ಹೀಗಾಗಿ ಕೋರ್ಟ್‌ ಜೂನ್‌ 7ರಂದು ಕೋರ್ಟ್‌ಗೆ ಹಾಜರಾಗಬೇಕೆಂದು ಸೂಚಿಸಿತ್ತು.. ಅದರಂತೆ ರಾಹುಲ್‌ ಗಾಂಧಿ ಇಂದು ಕೋರ್ಟ್‌ಗೆ ಹಾಜರಾಗಿ ಜಾಮೀನು ಪಡೆದಿದ್ದಾರೆ..

ಇನ್ನು ಜಾಮೀನು ಪಡೆದ ಮೇಲೆ ರಾಹುಲ್‌ ಗಾಂಧಿಯವರು ಕೆಪಿಸಿಸಿ ಕಚೇರಿಗೆ ತೆರಳಿ ಗೆದ್ದ ಹಾಗೂ ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿಗಳ ಜೊತೆ ಸಮಾಲೋಚನೆ ನಡೆಸಿದರು..

 

Share Post