Rahul Bisuit: ನಾಯಿ ಮುಟ್ಟದ ಬಿಸ್ಕೆಟ್ ಕಾರ್ಯಕರ್ತನಿಗೆ ನೀಡಿದ ರಾಹುಲ್; ವಿಡಿಯೋ ಇದೆ..!
ನವದೆಹಲಿ; ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul gadhi) ಉತ್ತರ ಭಾರತದಲ್ಲಿ ಭಾರತ್ ನ್ಯಾಯ್ ಯಾತ್ರೆ (Bharat nyay yathra) ಮಾಡುತ್ತಿದ್ದಾರೆ. ಈ ವೇಳೆ ಅವರು ನಡವಳಿಕೆಗಳು ಹಲವು ಅವಾಂತರಗಳಿಗೆ ಕಾರಣವಾಗುತ್ತಿವೆ. ಯಾತ್ರೆ ಮಾಡಬೇಕಾದರೆ ರಾಹುಲ್ ಅವರು ಸಾಮಾನ್ಯ ಜನರನ್ನು ಭೇಟಿಯಾಗುವುದು, ಅವರೊಂದಿಗೆ ಒಡನಾಡುವುದು ಮಾಡುತ್ತಿದ್ದಾರೆ. ಇದೇ ವೇಳೆ ಅವರು ನಾಯಿ ಮರಿಯೊಂದಕ್ಕೆ (Dog) ಬಿಸ್ಕೆಟ್ ನೀಡಲು ಹೋಗಿದ್ದಾರೆ. ಆದ್ರೆ ನಾಯಿ ಮರಿ ಆ ಬಿಸ್ಕೆಟ್ ಅನ್ನು ಮುಟ್ಟೋದೇ ಇಲ್ಲ. ನಾಯಿ ಮುಟ್ಟದ ಬಿಸ್ಕೆಟ್ ಅನ್ನು ರಾಹುಲ್ ಬಿಸಾಕಬೇಕಿತ್ತು. ಆದ್ರೆ ರಾಹುಲ್ ಅದೇ ಬಿಸ್ಕೆಟ್ ಅನ್ನು ಅಲ್ಲೇ ಇದ್ದ ಕಾಂಗ್ರೆಸ್ ಕಾರ್ಯಕರ್ತನಿಗೆ ಕೊಟ್ಟಿದ್ದಾನೆ. ಈ ದೃಶ್ಯಾವಳಿ ಬಿಜೆಪಿ ಸೇರಿ ಇತರ ಕಾಂಗ್ರೆಸ್ ವಿರೋಧಿಗಳಿಗೆ ಅಸ್ತ್ರವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.
ಕಾರಿನ ಮೇಲೆ ಕೂರಿಸಿ ನಾಯಿಗೆ ಬಿಸ್ಕೆಟ್ ತಿನ್ನಿಸಲು ಯತ್ನ!
ರಾಹುಲ್ ಗಾಂಧಿಯವರು ಭಾರತ್ ನ್ಯಾಯ್ ಯಾತ್ರೆಯ ಭಾಗವಾಗಿ ರೋಡ್ ಶೋ ಮಾಡುತ್ತಿದ್ದರು. ಈ ವೇಳೆ ಬಂದ ಸಾಕುನಾಯಿಯನ್ನು ಕಾರಿನ ಮೇಲೆ ಕೂರಿಸಿದ್ದಾರೆ. ಅನಂತರ ಅದಕ್ಕೆ ಬಿಸ್ಕೆಟ್ ನೀಡಿದ್ದಾರೆ. ಆದ್ರೆ ಆ ನಾಯಿ ಆ ಬಿಸ್ಕೆಟ್ ಮುಟ್ಟದೆ ಸುಮ್ಮನಾಗಿದೆ. ಇದರಿಂದಾಗಿ ನಕ್ಕ ರಾಹುಲ್ ಗಾಂಧಿ ಕಾಂಗ್ರೆಸ್ ಕಾರ್ಯಕರ್ತನಿಗೆ ಕೊಟ್ಟಿದ್ದಾನೆ. ಈ ವಿಡಿಯೋ ವನ್ನು ಟ್ವಿಟರ್‌ನಲ್ಲಿ ಬಿಜೆಪಿ ಐಟಿ ಸೆಲ್ನ ಅಮಿತ್ ಮಾಳವೀಯ (Amith malaviya) ಹಂಚಿಕೊಂಡಿದ್ದಾರೆ.
ಬೊಗಳೋರನ್ನು ಬೂತ್ ಏಜೆಂಟರನ್ನಾಗಿ ಮಾಡಿ ಎಂದಿದ್ದ ಖರ್ಗೆ!
ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಬೂತ್ ಬೊಗಳೋ ಕಾರ್ಯಕರ್ತರನ್ನು ಬೂತ್ ಏಜೆಂಟರನ್ನಾಗಿ ಮಾಡಿ ಎಂದು ಹೇಳಿದ್ದರು. ಕಾಂಗ್ರೆಸ್‌ನ ಕಾರ್ಯಕ್ರಮವೊಂದರಲ್ಲಿ ಖರ್ಗೆ ಮಾತನಾಡಿದ್ದ ಆ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಕಾರ್ಯಕರ್ತರನ್ನು ನಾಯಿಗಳ ರೀತಿಯ ನೋಡಿದ್ದಕ್ಕೆ ಆಕ್ರೋಶಗಳೂ ವ್ಯಕ್ತವಾಗಿದ್ದವು. ಈ ವಿಚಾರವನ್ನು ಪ್ರಸ್ತಾಪ ಮಾಡಿರುವ ಅಮಿತ್ ಮಾಳವೀಯ, ರಾಹುಲ್ ಗಾಂಧಿಯವರು ತಮ್ಮ ಕಾರ್ಯಕರ್ತನನ್ನು ನಾಯಿಯಂತೆ ತಿಳಿದು ನಾಯಿ ತಿನ್ನದ ಬಿಸ್ಕೆಟ್ ನೀಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಕಾರ್ಯಕರ್ತರನ್ನು ನಾಯಿಯಂತೆ ನಡೆಸಿಕೊಳ್ಳುವ ಕಾಂಗ್ರೆಸ್ ಪಕ್ಷ ದೇಶದಿಂದ ಕಣ್ಮರೆಯಾಗುವುದು ಪಕ್ಕಾ ಎಂದೂ ಅಮಿತ್ ಮಾಳವೀಯ ಹೇಳಿಕೊಂಡಿದ್ದಾರೆ. ಇದಕ್ಕೆ ಬಿಜೆಪಿ ನಾಯಕಿ ಪಲ್ಲವಿ, ಹಿಮಂತ್ ಬಿಸ್ವಾ ಶರ್ಮಾ ಸೇರಿದಂತೆ ಹಲವರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಹಿಮಂತ್ ಬಿಸ್ವಾ ಪ್ರತಿಕ್ರಿಯೆ ನೀಡುತ್ತಾ, ರಾಹುಲ್ ಗಾಂಧಿ ಇಬ್ಬರೇ ಅಲ್ಲ, ಅವರ ಇಡೀ ಕುಟುಂಬ ನನಗೆ ಬಿಸ್ಕೆಟ್ ತಿನ್ನಿಸಲು ಪ್ರಯತ್ನಿಸಿದರು. ಆದ್ರೆ ಅದು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಜನರ ಗಮನ ಸೆಳೆಯೋದಕ್ಕೆ ನಾನಾ ಪ್ರಯತ್ನ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಹೀಗೆ ಎಡವಟ್ಟುಗಳನ್ನು ಮಾಡಿಕೊಳ್ಳುತ್ತಿದ್ದಾರೆ. ವಿನಾಕರಣ ವಿವಾದಿತ ಹೇಳಿಕೆಗಳನ್ನು ನೀಡಿ ಹೆಸರು ಕೆಡಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಈ ವರ್ತನೆಗಳಿಂದಾಗಿ ಬಿಜೆಪಿಗೆ ಮತ್ತಷ್ಟು ಲಾಭವಾಗಬಹುದು ಎಂದೇ ಹೇಳಲಾಗುತ್ತಿದೆ.