16.5 ಲಕ್ಷ ಯುವಕರು ಉದ್ಯೋಗ ವಂಚಿತರಾಗಿದ್ದಾರೆ : ಯೋಗಿ ಸರ್ಕಾರ ಟೀಕಿಸಿದ ಪ್ರಿಯಾಂಕಾ ಗಾಂಧಿ
ನವದೆಹಲಿ : ಚುನಾವಣೆ ಸಮೀಪಿಸುತ್ತಿದ್ದಂತೆ ಆರೋಪ ಪ್ರತ್ಯಾರೋಪಗಳು ಶುರು ಆಗಿದೆ. ಉತ್ತರಪ್ರದೇಶದ ಯೋಗಿ ಆದಿತ್ಯ ಸರ್ಕಾರವನ್ನು ಪ್ರಿಯಾಂಕ ಗಾಂಧಿ ಟೀಕಿಸಿದ್ದಾರೆ.
ತಮ್ಮ ಟ್ವಿಟ್ಟರ್ ಖಾತೆ ಮೂಲಕ ಪ್ರಿಯಾಂಕಾ ಯೋಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಯೋಗಿ ಆದಿತ್ಯನಾಥ್ ಅವರ ಸರ್ಕಾರದಿಂದ ಕಳೆದ ಐದು ವರ್ಷದಲ್ಲಿ 16.5 ಲಕ್ಷ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ ಹಾಗೂ ನಾಲ್ಕು ಕೋಟಿ ಜನರು ಉದ್ಯೋಗದ ಭರವಸೆಯನ್ನು ಕಳೆದುಕೊಂಡಿದ್ದಾರೆ. ಈ ಬಗ್ಗೆ ಯಾರು ಮಾತನಾಡುವುದಿಲ್ಲ ಎಂದು ಯೋಗಿ ಆದಿತ್ಯನಾಥ್ ಅವರ ವಿರುದ್ಧ ಕಿಡಿ ಕಾರಿದ್ದಾರೆ.
ಯೋಗಿ ಅವರು ತಮ್ಮ ಐದು ವರ್ಷದಲ್ಲಿ ಶಿಕ್ಷಣಕ್ಕೆ ಅಧಿಕ ಒತ್ತನ್ನು ನೀಡಿಲ್ಲ, ಯುವಕರಿಗೆ ವಂಚನೆ ಮಾಡಿದ ಸರ್ಕಾರಕ್ಕೆ ನಿಮ್ಮ ಮತದ ಮೂಲಕ ಉತ್ತರ ಕೊಡಬಹುದು ಎಂದು ಯುವಕರಿಗೆ ಕಿವಿ ಮಾತು ಹೇಳಿದ್ದಾರೆ.
..@myogiadityanath जी की सरकार ने 5 सालों में उप्र के शिक्षा बजट में भारी कटौती की।
बजट ज्यादा मिलता तो युवाओं को नए विवि, इंटरनेट, छात्रवृत्तियां, लाइब्रेरी व हॉस्टल मिलते
युवाओं यही इस चुनाव का असली एजेंडा है। इस पर सवाल पूछिए व जो भटकाए, उसको वोट की ताकत से करारा जवाब दीजिए pic.twitter.com/yMZCfJqyMW
— Priyanka Gandhi Vadra (@priyankagandhi) January 18, 2022