DistrictsPolitics

ಬಾಬ್ರಿ ಮಸೀದಿಯಂತೆ ಭಟ್ಕಳ ಚಿನ್ನದ ಪಳ್ಳಿ ಮಸೀದಿ ನಿರ್ನಾಮ; ಸಂಸದ ಅನಂತಕುಮಾರ್‌ ಹೆಗ್ಡೆ ವಿವಾದ

ಕುಮಟಾ; ವಿವಾದಿತ ಹೇಳಿಕೆಗಳಿಗೆ ಹೆಸರಾಗಿರುವ ಉತ್ತರ ಕನ್ನಡದ ಸಂಸದ ಅನಂತ್‌ಕುಮಾರ್‌ ಹೆಗ್ಡೆ ಹಲವು ತಿಂಗಳುಗಳಿಂದ ಸುಮ್ಮನೆ ಇದ್ದರು. ಇದೀಗ ಮತ್ತೆ ಅವರು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಇಂದು ಕುಮಟಾದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ನಿರ್ನಾಮ ಆದಂತೆ ಭಟ್ಕಳದ ಚಿನ್ನದಪಳ್ಳಿ ಮಸೀದಿಯೂ ಆಗಲಿದೆ ಎಂದಿದ್ದಾರೆ.

ಇದನ್ನು ಬೆದರಿಕೆ ಎಂದು ಬೇಕಾದರೂ ತಿಳಿದುಕೊಳ್ಳಿ. ಆದ್ರೆ ಚಿನ್ನದಪಳ್ಳಿ ಮಸೀದಿ ನಿರ್ನಾಮ ಆಗಲಿದೆ ಎಂದು ಸಂಸದ ಅನಂತ್‌ಕುಮಾರ್‌ ಹೆಗಡೆ ಹೇಳಿದ್ದಾರೆ. ಇದು ಹಿಂದೂ ಸಮಾಜದ ತೀರ್ಮಾನ. ಅನಂತಕುಮಾರ್ ಹೆಗಡೆ ತೀರ್ಮಾನ ಅಂತೂ ಅಲ್ಲ. ಶಿರ್ಸಿಯ ಸಿಪಿ ಬಜಾರ್​​ನಲ್ಲಿ ಮಸೀದಿ ಒಂದಿದ್ದು, ಅಲ್ಲಿ ಈ ಹಿಂದೆ ವಿಜಯ ವಿಠ್ಠಲ ದೇವಸ್ಥಾನ ಇತ್ತು. ಶ್ರೀರಂಗಪಟ್ಟಣದಲ್ಲಿರುವ ದೊಡ್ಡ ಮಸೀದಿ ಈ ಹಿಂದೆ ಮಾರುತಿ ದೇವಸ್ಥಾನವಾಗಿತ್ತು. ಈಗಲೂ ಅಲ್ಲಿಗೆ ಭೇಟಿ ಕೊಟ್ಟರೆ ಮಾರುತಿ ದೇವಸ್ಥಾನ ಕಾಣಿಸುತ್ತದೆ ಎಂದೂ ಅನಂತಕುಮಾರ್‌ ಹೆಗಡೆ ಹೇಳಿದ್ದಾರೆ.

 

Share Post