DistrictsPolitics

ಪ್ರದೀಪ್ ಈಶ್ವರ್ ಬಳೆ ತೊಟ್ಟುಕೊಳ್ಳಲಿ; ಡಾ.ಕೆ.ಸುಧಾಕರ್

ಚಿಕ್ಕಬಳ್ಳಾಪುರ; ಶಾಸಕ‌ ಪ್ರದೀಪ್ ಈಶ್ವರ್ ಹಾಗೂ ಸಂಸದ ಸುಧಾಕರ್ ನಡುವಿನ ಸಮರ ಮುಂದುವರೆದಿದೆ.. ಇಂದು ಸಂಸದ ಡಾ.ಕೆ ಸುಧಾಕರ್ ಅವರು ಶಾಸಕ ಪ್ರದೀಪ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಸಾವರ್ವಜನಿಕರ ಕುಂದುಕೊರತೆಗಳನ್ನ ಆಲಿಸಿ ಅವರು ಮಾತನಾಡಿದರು.

 ಶಾಸಕ ಪ್ರದೀಪ್ ಈಶ್ವರ್‌ಗೆ ಒಂದು ಡಜನ್ ಬಳೆ ಕೊಡಿಸ್ತಿನಿ, ಹಾಕಿಕೊಳ್ಳೊಕೆ ಹೇಳಿ ಎಂದು ಸುಧಾಕರ್ ಹೇಳಿದ್ದಾರೆ..

ಬುಧವಾರ, ಶನಿವಾರ ಚಿಕ್ಕಬಳ್ಳಾಪುರದಲ್ಲಿ ಸಂತೆ ಇರುತ್ತೆ, ಸೋಮವಾರ ಪೆರೇಸಂದ್ರದಲ್ಲಿ ಸಂತೆ ಇರುತ್ತೆ.. ಸಂತೆಯಲ್ಲಿ ಒಳ್ಳೆ ಬಳೆ ಕೊಡಿಸ್ತಿನಿ ಹಾಕಿಕೊಳ್ಳೊಕೆ ಹೇಳಿ ಎಂದು ವಾಗ್ದಾಳಿ ನಡೆಸಿದರು.

 ಚಿಕ್ಕಬಳ್ಳಾಪುರದಲ್ಲಿ ಆಡಳಿತ ವ್ಯವಸ್ಥೆ ಹಾಳಾಗಿದೆ. ಜನ ಸಾಮಾನ್ಯರು ಕೆಲಸ ಕಾರ್ಯಗಳಿಗೆ ಅಲೆದಾಡುತ್ತಿದ್ದಾರೆ. ಕ್ರಷರ್ ಟಿಪ್ಪರ್ ಗಳಿಗೆ ಕಡಿವಾಣ ಹಾಕಲು ಸಾಧ್ಯ ಆಗ್ತಿಲ್ಲವಂತೆ ಹಾಗಾಗಿ ಕೈಗೆ ಬಳೆ ತೊಟ್ಟುಕೊಳ್ಳಲಿ ಅಂತ ಟಾಂಗ್ ಕೊಟ್ಟಿದ್ದಾರೆ.

Share Post